ಗೋದಾಮಿನಲ್ಲಿ ಅಗ್ನಿ ಅವಘಡ ➤3,400 ಜನರನ ಸ್ಥಳಾಂತರ

(ನ್ಯೂಸ್ ಕಡಬ) Newskadaba.com: ಹಾಂಗ್ ಕಾಂಗ್; ಮಾ,25  ನಗರದ ಕೈಗಾರಿಕಾ ಪ್ರದೇಶವಾದ ಕೌಲೂನ್‌ನ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.ಬೆಂಕಿಯ ಪರಿಣಾಮ ಕಟ್ಟಡದಿಂದ ದಟ್ಟ ಹೊಗೆ ಹೊರಬರುತ್ತಿರುವುದು ಕಂಡು ಬಂದಿದೆ.

ಹೀಗಾಗಿ ಹತ್ತಿರದಲ್ಲಿನ ನಾಲ್ಕು ಶಾಲೆಯ ವಿದ್ಯಾರ್ಥಿಗಳು ಹಾಗೂ ಹತ್ತಿರದಲ್ಲಿದ್ದ ಕಟ್ಟಡಗಳಲ್ಲಿನ ನಿವಾಸಿಗಳು ಸೇರಿ 3,400 ಜನರನ್ನು ಸ್ಥಳಾಂತರಿಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.ಈ ಘಟನೆಯಲ್ಲಿ, ಹೊಗೆ ಸೇವಿಸಿ ಇಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದಾರೆ. ಬೆಂಕಿ ಕಾಣಿಸಿಕೊಂಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ ಎಂದೂ ಅವರು ತಿಳಿಸಿದ್ದಾರೆ.

Also Read  ವಾಟ್ಸಾಪ್ ಗಳಲ್ಲಿ ಕೆಂಪು ಹಾರ್ಟ್ ಇಮೋಜಿ ಕಳುಹಿಸಿದರೆ ಜೈಲು ಶಿಕ್ಷೆ ಗ್ಯಾರಂಟಿ

 

 

 

error: Content is protected !!
Scroll to Top