ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರ ಮುಷ್ಕರ ವಾಪಸ್ ➤ ಆರೋಗ್ಯ ಸೇವೆ ಸುಗಮ ಕಾರ್ಯಾಚರಣೆ

(ನ್ಯೂಸ್ ಕಡಬ) Newskadaba.com ಬೆಂಗಳೂರು: ಮಾ.24  ಮುಷ್ಕರ ನಿರತರಾಗಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದ ನೌಕರರು ತಮ್ಮ ಮುಷ್ಕರ ಹಿಂಪಡೆದು ಕರ್ತವ್ಯಕ್ಕೆ ಹಾಜರಾಗಿದ್ದು, ಸಾರ್ವಜನಿಕ ಆರೋಗ್ಯಸೇವೆಗಳು ಸುಗಮವಾಗಿ ಕಾರ್ಯಾಚರಣೆಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

ರಾಷ್ಟ್ರೀಯಆರೋಗ್ಯಅಭಿಯಾನದಡಿಯಲ್ಲಿ ಒಟ್ಟು 30,574 ಕ್ಕೂ ಹೆಚ್ಚು ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಅಂತಿಮವಾಗಿ, ಎಲ್ಲಾ ಜಿಲ್ಲೆಗಳಿಂದ ಪ್ರತಿಭಟನಾನಿರತ ಎನ್.ಎಚ್.ಎಂ. ಸಿಬ್ಬಂದಿಗಳ ಹಾಜರಾತಿಯನ್ನು ಪಡೆಯಲಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಪೂರ್ಣಪ್ರಮಾಣದ (100%) ಹಾಜರಾತಿಯಿರುವುದು ತಿಳಿದುಬಂದಿದೆ.

ಇನ್ನುಳಿದ ಜಿಲ್ಲೆಗಳಲ್ಲಿ ಸಿಬ್ಬಂದಿಗಳು ನಿಧಾನವಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದು, ಸಾರ್ವಜನಿಕ ಆರೋಗ್ಯಸೇವೆಗಳು ಸುಗಮವಾಗಿ ಕಾರ್ಯಾಚರಣೆಗೊಳ್ಳುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ ಮುಖ್ಯ ಆಡಳಿತಾಧಿಕಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ ಠಾಣಾ ವ್ಯಾಪ್ತಿಗೂ ಬಂತು ಸುಸಜ್ಜಿತ 'ಹೈವೇ ಪಟ್ರೋಲ್' ► ಇನ್ಮುಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಾದಿದೆ ಬಿಗ್ ಶಾಕ್..!!

 

 

error: Content is protected !!
Scroll to Top