ದನದ ಕುತ್ತಿಗೆ ಕಡಿದು ತುಂಗಾ ನದಿಗೆ ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು !

(ನ್ಯೂಸ್ ಕಡಬ)newskadaba.com ತೀರ್ಥಹಳ್ಳಿ, ಮಾ.24. ದನದ ಕುತ್ತಿಗೆ ಕಡಿದು ತಲೆಯ ಭಾಗವನ್ನು ತುಂಗಾ ನದಿಗೆ ದುಷ್ಕರ್ಮಿಗಳು ಎಸೆದಿರುವ ಘಟನೆ ವರದಿಯಾಗಿದೆ.


ಸ್ಥಳೀಯರು ಸ್ನಾನ ಮಾಡಲು ತುಂಗಾ ನದಿಯ ಹೊಳೆಗೆ ಇಳಿದಾಗ ಘಟನೆ ಬೆಳಕಿಗೆ ಬಂದಿದೆ. ತುಂಗಾನದಿಯಲ್ಲಿ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಚಕ್ರತೀರ್ಥದಲ್ಲಿ ಈ ಅಮಾನವೀಯ ಘಟನೆ ಜರುಗಿದೆ.

ಶಂಖತೀರ್ಥ, ಚಕ್ರತೀರ್ಥ, ಗದಾತೀರ್ಥ, ಪದ್ಮತೀರ್ಥ ಎಂಬ ಪವಿತ್ರ ತೀರ್ಥಗಳ ಸಮಾಗಮ ಆಗುವ ತುಂಗಾ ನದಿಯ ರಾಮೇಶ್ವರ ದೇವಸ್ಥಾನದ ಹಿಂಭಾಗದ ಸ್ಥಳಗಳಲ್ಲಿ ಈ ಘಟನೆ ನೆಡೆದಿದ್ದು ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ದುಷ್ಕರ್ಮಿಗಳು ಹೋಗಿದ್ದಾರೆ.

Also Read  ಕಳಪೆ ಗುಣಮಟ್ಟದ ಮೊಟ್ಟೆ ಪೂರೈಕೆ ತಡೆಗೆ ವಿಶೇಷ ಟಾಸ್ಕ್ ಫೋರ್ಸ್ ರಚನೆ

 

 

error: Content is protected !!
Scroll to Top