ಮಂಗಳೂರು ಉತ್ತರ ಸಂಚಾರಿ ಠಾಣೆಯ ನೂತನ ಕಟ್ಟಡದ ಉದ್ಘಾಟಿಸಿದ ಶಾಸಕ ಭರತ್ ಶೆಟ್ಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 21. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾದ ಮಂಗಳೂರು ಉತ್ತರ ಸಂಚಾರಿ ಠಾಣೆಯ ನೂತನ ಕಟ್ಟಡವನ್ನು ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಉದ್ಘಾಟಿಸಿದರು.

ಈ ನೂತನ ಠಾಣೆಯು  2 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ವಿಶಾಲವಾದ ಪಾರ್ಕಿಂಗ್ , ಪೆರೇಡ್‍ಗೆ ಬೇಕಾದ ಸ್ಥಳಾವಕಾಶ, ವಿಶಾಲವಾದ ಕಟ್ಟಡವನ್ನು ಹೊಂದಿದೆ. ಪ್ರಸ್ತುತ ಬೈಕಂಪಾಡಿ ಎಪಿಎಂಸಿ ಯಾರ್ಡ್‍ನಲ್ಲಿರುವ ಈ ಠಾಣೆಯು ಶೀಘ್ರ ಸ್ಥಳಾಂತರಗೊಳ್ಳಲಿದೆ. ಇದಕ್ಕೆ ಅನುದಾನ ಒದಗಿಸಿಕೊಡುವಲ್ಲಿ ಸಹಕರಿಸಿದ ಗೃಹಮಂತ್ರಿಗಳು, ಸಂಬಂಧಪಟ್ಟ ಇಲಾಖೆಯ ಪೊಲೀಸ್ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳನ್ನು ಶಾಸಕರು ಸ್ಮರಿಸಿಕೊಂಡರಲ್ಲದೆ, ನೂತನ ಠಾಣೆಗೆ ಕಂಪ್ಯೂಟರ್ , ಹಾಗೂ ಇತರ ಮೂಲಸೌಕರ್ಯದ ಅಗತ್ಯವಿದ್ದು ಉದ್ಯಮಿಗಳು ಸಹಕರಿಸುವಂತೆ ಮನವಿ ಮಾಡಿದರು. ಪೊಲೀಸ್ ಆಯುಕ್ತ ಕುಲ್‍ದೀಪ್ ಆರ್ ಜೈನ್, ಕಾನೂನು ಸುವ್ಯವಸ್ಥೆ ಪೊಲೀಸ್ ಉಪ ಆಯುಕ್ತ ಅಂಶುಕುಮಾರ್, ಅಪರಾಧಿಕ ಸಂಚಾರ ಪೊಲೀಸ್ ಉಪ ಆಯುಕ್ತ ಬಿ.ಪಿ ದಿನೇಶ್ ಕುಮಾರ್, ಪೊಲೀಸ್ ವಸತಿ ವ್ಯವಸ್ಥಾಪಕಿ ಪ್ರಜ್ನಾ ಆನಂದ್, ಸಂಚಾರ ಎಸಿಪಿ ಗೀತಾ ಕುಲಕರ್ಣಿ, ಉತ್ತರ ಸಂಚಾರಿ ಸಿಐ ಸುರೇಶ್ ಕುಮಾರ್, ಮನಪಾ ಸದಸ್ಯರು, ಉದ್ಯಮಿಗಳು, ವಿವಿಧ ಸಂಘ ಸಂಸ್ಥೆ ಪ್ರಮುಖರು ಉಪಸ್ಥಿತರಿದ್ದರು.

Also Read  ಉಳ್ಳಾಲ: ಕಡಲ್ಕೊರೆತಕ್ಕೆ ಕೊಚ್ಚಿ ಹೋದ ರಸ್ತೆ

error: Content is protected !!
Scroll to Top