➤ ಮನೀಶ್ ಸಿಸೋಡಿಯಾಗೆ ಮತ್ತೆ 14 ದಿನ ಕಸ್ಟಡಿ ಅವಧಿ ವಿಸ್ತರಣೆ

(ನ್ಯೂಸ್ ಕಡಬ) newskadaba.com. ನವದೆಹಲಿ, ಮಾ 20.  ಎಎಪಿ ಮುಖಂಡ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನ್ಯಾಯಾಂಗ ಬಂಧನವನ್ನ ಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು 14 ದಿನಗಳವರೆಗೆ ವಿಸ್ತರಿಸಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆಗೆ ಅಡ್ಡಿಪಡಿಸಲು ಸಿಸೋಡಿಯಾ ‘ದೊಡ್ಡ ಪ್ರಮಾಣದ ಡಿಜಿಟಲ್ ಪುರಾವೆಗಳನ್ನ ನಾಶಪಡಿಸುವಲ್ಲಿ’ ಭಾಗಿಯಾಗಿದ್ದಾರೆ ಮತ್ತು 14 ಫೋನ್‌‌ಗಳನ್ನ ಬದಲಿಸಿ ನಾಶಪಡಿಸಿದ್ದಾರೆ ಎಂದು ಹಿಂದಿನ ವಾರ ಇಡಿ ಹೇಳಿಕೊಂಡಿತ್ತು.

ಇನ್ನು ಭ್ರಷ್ಟಾಚಾರದ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸೋಡಿಯಾ ಅವರನ್ನು ಮಾರ್ಚ್ 9 ರಂದು ತಿಹಾರ್ ಜೈಲಿನಲ್ಲಿ ಇಡಿ ಬಂಧಿಸಿದ್ದು, ಫೆಬ್ರವರಿ 26ರಂದು ಸಿಬಿಐ ಅವರನ್ನ ಬಂಧಿಸಿತ್ತು.

Also Read  ಮಹಿಳೆಗೆ ಲೈಂಗಿಕ ಕಿರುಕುಳ ಆರೋಪ..!  ಬಿಜೆಪಿ ಮುಖಂಡನ ವಿರುದ್ಧ ಪ್ರಕರಣ ದಾಖಲು     

 

error: Content is protected !!
Scroll to Top