ಮೆಹಂದಿ ಹಚ್ಚಿ ಅದಕ್ಕೆ ಹೇಗೆ ಬಣ್ಣ ಬರಿಸಬೇಕೆಂಬ ಗೊಂದಲವೇ…? ► ಮೆಹಂದಿ ಬಣ್ಣ ಕೆಂಪಾಗಿ ಕಾಣಲು ಕೆಲವೊಂದು ಮಾಹಿತಿ

(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜ.06. ಮದುವೆ ಸಂದರ್ಭದಲ್ಲಿ ವಧುವಿನ ಮೆಹೆಂದಿ ಡಾರ್ಕ್‌ ಆಗಿ ತುಂಬಾ ದಿನಗಳ ಕಾಲ ಉಳಿಯಲು ಸುಲಭ ವಿಧಾ‌ನಗಳನ್ನು ನಾವು ತಿಳಿಸಿಕೊಡುತ್ತೇವೆ.

ಮೆಹೆಂದಿ ಹಾಕುವ ಮುನ್ನ ಕೈ ಹಾಗು ಕಾಲುಗಳನ್ನು ಚೆನ್ನಾಗಿ ತೊಳೆಯಿರಿ. ಕೈ ಕಾಲಿನಲ್ಲಿದ್ದ ಧೂಳು, ಮಣ್ಣು ಹೋದ ಮೇಲೆ ಮೆಹೆಂದಿ ಬಣ್ಣ ಚೆನ್ನಾಗಿ ಉಳಿಯುತ್ತದೆ. ಮೆಹೆಂದಿಯನ್ನು 7-8 ಗಂಟೆಗಳ ಕಾಲ ಕೈಯಲ್ಲಿ ಹಾಗೆಯೆ ಇಟ್ಟರೆ ಅದರ ಬಣ್ಣ ಹೆಚ್ಚಾಗುತ್ತಾ ಹೋಗುತ್ತದೆ. ಆದರೆ ನೀವು ಮೆಹೆಂದಿ ಹಾಕಿದ ತಕ್ಷಣ ತೊಳೆದರೆ ಬಣ್ಣ ಚೆನ್ನಾಗಿ ಬರೋದಿಲ್ಲ. ಮೆಹೆಂದಿ ಹಾಕಿ ಅದು ಒಣಗಿದ ನಂತರ ಅದರ ಮೇಲೆ ನಿಂಬೆ ರಸ ಮತ್ತು ಸಕ್ಕರೆ ನೀರು ಬೆರೆಸಿ ಹಾಕಿ. ಆದರೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಹಾಕಬೇಡಿ. ಸ್ವಲ್ಪವೇ ಹಾಕಿ. ಇದರಿಂದ ಬಣ್ಣ ಚೆನ್ನಾಗಿ ಬರುತ್ತದೆ. ಗ್ಯಾಸ್ ಸ್ಟವ್ ಮೇಲೆ ತವಾ ಇಟ್ಟು ಅದರ ಮೇಲೆ ವೀಳ್ಯದ ಎಲೆ ಇಡಿ. ಅದರ ಮೇಲೆ ನಾಲ್ಕೈದು ಲವಂಗ ಹಾಕಿ. ಅದರ ಹೊಗೆಯ ಮೇಲೆ ಮೆಹೆಂದಿ ಹಾಕಿದ ಕೈಗಳನ್ನು ಹಿಡಿದರೆ ಬಣ್ಣ ಕೆಂಪಾಗುತ್ತದೆ. ಮೆಹೆಂದಿಯನ್ನು ತೆಗೆಯಲು ನೀರು ಅಥವಾ ಸೋಪ್‌ ಬಳಕೆ ಮಾಡಬೇಡಿ. ನಿಧಾನವಾಗಿ ಕೈಗಳಿಂದಲೆ ಅಥವಾ ಚಾಕು ಬಳಸಿ ತೆಗೆಯಿರಿ. ಜೋರಾಗಿ ಕೈಗಳನ್ನು ಉಜ್ಜಬೇಡಿ. ಇದರಿಂದ ಡಿಸೈನ್‌ ಹಾಳಾಗುವ ಸಾಧ್ಯತೆ ಇದೆ. ಜೊತೆಗೆ ಎರಡು ಗಂಟೆಗಳ ಕಾಲ ನೀರಿನ ಹತ್ತಿರವೂ ಹೋಗಬೇಡಿ. ಬಣ್ಣ ಲೈಟ್‌ ಆಗುತ್ತದೆ.

Also Read  ಅ.20ರಂದು ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ; “ಮೌನ ಮಾರಿ ಅಸ್ಥಿರಂದ್ರತೆ”- ಡಾ.ಚೂಂತಾರು

ಬಣ್ಣವನ್ನು ಡಾರ್ಕ್‌ ಮಾಡುವ ಇನ್ನೊಂದು ವಿಧಾನ ಎಂದರೆ ಮೆಹೆಂದಿ ತೆಗೆದ ಮೇಲೆ ಬಾಮ್‌ ಹಚ್ಚುವುದು.ಮದುವೆಗೆ 1-2 ದಿನ ಮೊದಲೆ ಮೆಹೆಂದಿ ಹಚ್ಚಿ. ಯಾಕೆಂದರೆ ಎರಡು ದಿನದ ನಂತರ ಅದರ ಬಣ್ಣ ಡಾರ್ಕ್‌ ಆಗುತ್ತದೆ. ಫೋಟೊದಲ್ಲೂ ಚೆನ್ನಾಗಿ ಬರುತ್ತದೆ.

error: Content is protected !!
Scroll to Top