ಸವಣೂರು: ಜಿಲ್ಲಾ ಮಟ್ಟದ ಯುವಜನ ಮೇಳ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಜ.06. ಹೆಚ್ಚು ಯುವಪಡೆಯನ್ನು ಹೊಂದಿರುವ ನಮ್ಮ ದೇಶದ ಯುವಕರು ಮನಸು ಮಾಡಿದ್ದಲ್ಲಿ ದೇಶದಲ್ಲಿ ಅಮೂಲಾಗ್ರ ಬದಲಾವಣೆ ಸಾಧ್ಯವಿದೆ. ಜಾತಿ, ಭಾಷೆ, ಧರ್ಮವೆಂದು ಕಚ್ಚಾಡುವ ಬದಲು ಸಾಮರಸ್ಯದೊಂದಿಗೆ ಯುವಜನತೆ ಒಗ್ಗೂಡಿ ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಯುವಕರು ಶ್ರಮಪಡಬೇಕೆಂದು ಅರಣ್ಯ ,ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಅವರು  ಸವಣೂರು ದ.ಕ.ಜಿ.ಪಂ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಂಗಳೂರು, ದ.ಕ. ಜಿಲ್ಲಾ ಪಂಚಾಯಿತಿ, ಪುತ್ತೂರು ತಾಲೂಕು ಪಂಚಾಯಿತಿ, ಸವಣೂರು ಗ್ರಾಮ ಪಂಚಾಯಿತಿ, ದ.ಕ. ಜಿಲ್ಲಾ ಯುವಜನ ಒಕ್ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ಸವಣೂರು ಯುವಕ ಮಂಡಲ ಮತ್ತು ತಾಲೂಕಿನ ಎಲ್ಲ ಯುವಕ ಮಂಡಲ, ಯುವತಿ ಮಂಡಲಗಳ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯುವ ಜಿಲ್ಲಾ ಯುವಜನ ಮೇಳವನ್ನು ಜ.5 ರಂದು ರಾತ್ರಿ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸುಳ್ಯ ಶಾಸಕ ಎಸ್.ಅಂಗಾರ ಮಾತನಾಡಿ, ಜನಪದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಜನಮೇಳಗಳು ಪೂರಕ. ಇಂತಹ ಮೇಳಗಳಲ್ಲಿ ಯುವ ಜನತೆ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

Also Read  ಮುರುಡೇಶ್ವರದಲ್ಲಿ ಜಾನುವಾರು ಕಳ್ಳತನ ಯತ್ನ ➤ ಓರ್ವನ ಬಂಧನ ,ನಾಲ್ವರು ಪರಾರಿ

ವೇದಿಕೆಯಲ್ಲಿ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ. ಸೀತಾರಾಮ ರೈ ,ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ್, ಜಿಲ್ಲಾ ಕೆಡಿಪಿ ಸದಸ್ಯ ಸತೀಶ್ ಕುಮಾರ್‍ ಕೆಡೆಂಜಿ, ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ತಾ.ಪಂ.ಸದಸ್ಯೆ ಲಲಿತಾ ಈಶ್ವರ ಚಾರ್ವಾಕ, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ., ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಜಿಲ್ಲಾ ಯುವಜನ ಒಕ್ಕೂಟದ ಗೌರವಾಧ್ಯಕ್ಷ ರಾಜೀವ ಸಾಲಿಯಾನ್, ಸವಣೂರು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮೆದು, ಶಾಲಾ ಮುಖ್ಯಗುರು ಹರಿಶಂಕರ ಭಟ್, ತಾಲೂಕು ಯುವಜನ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕರುಂಬಾರು, ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್, ಮಂಗಳೂರು ತಾಲೂಕು ಯುವಜನ ಸೇವೆ ಕ್ರೀಡಾಧಿಕಾರಿ ಲಿಲ್ಲಿ ಪಾಯಸ್, ಪುತ್ತೂರಿನ ಮಾಮಚ್ಚನ್ ಎಂ, ಸುಳ್ಯದ ದೇವರಾಜ ಮುತ್ಲಾಜೆ, ಬಂಟ್ವಾಳದ ನವೀನ್ ಉಪಸ್ಥಿತರಿದ್ದರು.

ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಸುಪ್ರಿತ್ ರೈ ಖಂಡಿಗ, ಸಚಿನ್, ಗಂಗಾಧರ ಸುಣ್ಣಾಜೆ, ಗಂಗಾಧರ ಪೆರಿಯಡ್ಕ, ಕೋಶಾಧಿಕಾರಿ ಪ್ರವೀಣ್ ಚೆನ್ನಾವರ, ಪದ್ಮಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ.ಶೆಟ್ಟಿ, ವಿಜಯ ಈಶ್ವರ ಗೌಡ, ಜಿಸ್ಮಿತಾ ಕೆ.ಆರ್. ಕುಮಾರಮಂಗಲ, ಸತೀಶ್ ಬಲ್ಯಾಯ, ಪದ್ಮಶ್ರೀ ಯುವತಿ ಮಂಡಲದ ಅಧ್ಯಕ್ಷೆ ಶಾರದಾ ಮಾಲೆತ್ತಾರು, ಸವಣೂರು ಶಾಲಾ ಶಿಕ್ಷಕರಾದ ಬಾಲಕೃಷ್ಣ ಕೆ., ಕುಶಾಲಪ್ಪ ಬರೆಮೇಲು, ಮೋಹನ್ ರೈ ಕೆರೆಕ್ಕೋಡಿ ಅತಿಥಿಗಳನ್ನು ಗೌರವಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಇದಕ್ಕಾಗಿ ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಗಿರಿಶಂಕರ ಸುಲಾಯ ಅವರನ್ನು ಸಚಿವ ರಮಾನಾಥ ರೈ ಅವರು ಗೌರವಿಸಿದರು. ನರಿಮೊಗರು ಪ್ರಖ್ಯಾತಿ ಯುವತಿ ಮಂಡಲದ ಗುರುಪ್ರಿಯಾ ನಾಯಕ್, ದಿವ್ಯಾ, ಅಮೃತಾ ನಾಯಕ್ ನಾಡಗೀತೆ ಹಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ ಸ್ವಾಗತಿಸಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ವಂದಿಸಿದರು. ಜಿಲ್ಲಾಯುವಜನ ಒಕ್ಕೂಟದ ನಿರ್ದೇಶಕ ರಾಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

Also Read  ರಾಜ್ಯಮಟ್ಟದ ಎಲ್ಇಡಿ ಮತ್ತು ಎಲ್‌ಸಿಡಿ ಟಿವಿ ಸರ್ವಿಸಿಂಗ್ ತರಬೇತಿ ಕಾರ್ಯಾಗಾರ ► ತರಬೇತುದಾರರಾಗಿ ಕಡಬದ ಗಣೇಶ್ ಇಡಾಳ

error: Content is protected !!
Scroll to Top