ಕಡಬ ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ ► ಅಧ್ಯಕ್ಷರಾಗಿ ಕೆ.ಎಸ್.ಬಾಲಕೃಷ್ಣ ಕೊೖಲ, ಪ್ರ.ಕಾರ್ಯದರ್ಶಿಯಾಗಿ ನಾಗರಾಜ್ ಎನ್.ಕೆ. ಪುನರಾಯ್ಕೆ

(ನ್ಯೂಸ್ ಕಡಬ) newskadaba.com  ಕಡಬ, ಜ.05. ತಾಲೂಕು ಪರ್ತಕರ್ತರ ಸಂಘದ ಅಧ್ಯಕ್ಷರಾಗಿ ವಿಜಯಕರ್ನಾಟಕ ಪತ್ರಿಕೆಯ ಕಡಬ ವರದಿಗಾರ ಕೆ.ಎಸ್.ಬಾಲಕೃಷ್ಣ ಕೊೖಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉದಯವಾಣಿ ಪತ್ರಿಕೆಯ ಕಡಬ ವರದಿಗಾರ ನಾಗರಾಜ್ ಎನ್.ಕೆ ಪುನರಾಯ್ಕೆಯಾಗಿದ್ದಾರೆ.

ಶುಕ್ರವಾರದಂದು ಕಡಬದ ಪ್ರೆಸ್ ಕ್ಲಬ್ನಲ್ಲಿ ಬಾಲಕೃಷ್ಣ ಕೊೖಲ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಹೊಸದಿಗಂತ ಹಾಗೂ ಉದಯವಾಣಿಯ ಸವಣೂರು ವರದಿಗಾರ ಪ್ರವೀಣ್ ಚೆನ್ನಾವರ, ಜತೆ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ಕಡಬ ವರದಿಗಾರ ತಸ್ಲೀಂ ಮರ್ಧಾಳ, ಕೋಶಾಧಿಕಾರಿಯಾಗಿ ವಿಜಯವಾಣಿ ಪತ್ರಿಕೆಯ ಕಡಬ ವರದಿಗಾರ ಪ್ರವೀಣ್ ರಾಜ್ ಕೊೖಲ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರ ಕಲ್ಲುಗುಡ್ಡೆ ಖಾದರ್ ಸಾಹೇಬ್, ವಿಜಯಕರ್ನಾಟಕ ಪತ್ರಿಕೆಯ ಬೆಳ್ಳಾರೆ ವರದಿಗಾರ ರಾಮಚಂದ್ರ ಬರೆಪ್ಪಾಡಿ, ಸುದ್ದಿಬಿಡುಗಡೆ ಪತ್ರಿಕೆಯ ಕಡಬ ವರದಿಗಾರ ವಿಜಯಕುಮಾರ್ ಕಡಬ, ಉದಯವಾಣಿ ಹಾಗೂ ಹೊಸದಿಗಂತ ಪತ್ರಿಕೆಯ ಆಲಂಕಾರು ವರದಿಗಾರ ಸದಾನಂದ ಆಲಂಕಾರು, ಸುದ್ದಿಬಿಡುಗಡೆ ಪತ್ರಿಕೆಯ ಕಾಣಿಯೂರು ವರದಿಗಾರ ಸುಧಾಕರ ಆಚಾರ್ಯ ಕಾಣಿಯೂರು ಆಯ್ಕೆಯಾಗಿದ್ದಾರೆ. ಸಂಘದ ಕಾನೂನು ಸಲಹೆಗಾರ ರಮೇಶ್ ಎನ್.ಸಿ ರಾಮಕುಂಜ ಸಲಹೆ ಸೂಚನೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಬಾಲಕೃಷ್ಣ ಕೊೖಲ, ಕಡಬ ತಾಲೂಕು ಕೇಂದ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಪ್ರಾರಂಭವಾದ ನಮ್ಮ ಸಂಘವು ಕಡಿಮೆ ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಬೆಳೆದು ಬಂದಿದೆ. ಸಂಘವನ್ನು ಬೆಳೆಸುವಲ್ಲಿ ಕಡಬದ ಮಹಾಜನತೆ ತುಂಬು ಹೃದಯದಿಂದ ಪ್ರೋತ್ಸಾಹಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳು ದಾನಿಗಳು ನಮ್ಮ ನೂತನ ಪ್ರೆಸ್ ಕ್ಲಬ್ ಕಛೇರಿಗೆ ಪರಿಕರಗಳನ್ನು ಒದಗಿಸಿಕೊಟ್ಟಿದ್ದಾರೆ. ಸಂಘಕ್ಕೆ ಸ್ವಂತ ನಿವೇಶನ ಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಅದು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿದೆ. ಇದಕ್ಕೆ ಇಲ್ಲಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು. ನಮ್ಮ ಸಂಘದ ಸದಸ್ಯರು ಯಾವುದೇ ವಿವಾದಗಳಿಗೆ ಕಾರಣರಾಗಬಾರದು, ಪರ್ತಕರ್ತರು ಸ್ವಂತಿಕೆಯನ್ನು ಬೆಳೆಸಿಕೊಂಡು ವರದಿ ಮಾಡುವುದಲ್ಲದೆ, ಸಮಾಜಕ್ಕೆ ಪುರಕವಾದ ನಿಷ್ಪಕ್ಷಪಾತವಾದ ವರದಿಗಳನ್ನು ನೀಡಿ ಪತ್ರಿಕಾ ಧರ್ಮ ಮೆರೆಯಬೇಕು, ಮಾತ್ರವಲ್ಲ ಪರ್ತಕರ್ತನೆಂಬ ಅಹಂನಿಂದ ಸಮಾಜದಲ್ಲಿ ದುರ್ವರ್ತನೆ ಮಾಡಿ ನಮ್ಮ ಘನತೆಗೆ ಕುಂದು ತಂದುಕೊಳ್ಳುವ ವಾತಾವರಣ ನಿರ್ಮಾಣ ಮಾಡಬಾರದು ಎಂದು ಹೇಳಿದ ಬಾಲಕೃಷ್ಣ ಕೊೖಲ ಸಂಘವನ್ನು ಗಟ್ಟಿಯಾಗಿ ಕಟ್ಟಿ ಮಾದರಿಯಾಗಿ ಮಾಡುವಲ್ಲಿ ನಿಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

Also Read  ಶಾಲೆಗೆ ತೆರಳುತ್ತಿದ್ದ ಬಾಲಕಿಯ ಕೈ ಹಿಡಿದೆಳೆದು ಕಿರುಕುಳಕ್ಕೆ ಯತ್ನ ಪ್ರಕರಣ ➤ ಆರೋಪಿ ಅಂದರ್- ಪೋಕ್ಸೋ ಪ್ರಕರಣ ದಾಖಲು

ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ್ ಎನ್.ಕೆ ವರದಿ ಮಂಡಿಸಿ ಸಂಘ ಬೆಳೆದು ಬಂದ ಹಾದಿಯನ್ನು ಸಭೆಯ ಮುಂದಿಟ್ಟು, ಸಂಘದ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿ ಎಲ್ಲರ ಸಹಕಾರದಿಂದ ಸಂಘ ಅತ್ಯತ್ತಮ ಹಾದಿಯಲ್ಲಿ ಸಾಗುತ್ತಿದೆ. ಸಂಘದ ಅಭಿವೃದ್ಧಿಗೆ ಬೇಕಾದ ಎಲ್ಲಾ ದಾಖಲೆಗಳನ್ನು ತಯಾರು ಮಾಡಲಾಗಿದೆ. ನಮಗೆ ನಿವೇಶನ ಮಂಜೂರಾದರೆ ಪತ್ರಿಕಾ ಭವನ ನಿರ್ಮಿಸುವ ಬಗ್ಗೆ ಚಿಂತಿಸಲಾಗುವುದು. ಈ ನಿಟ್ಟಿನಲ್ಲಿ ಆರ್ಥಿಕ ಕ್ರೋಡೀಕರಣಕ್ಕೂ ಮುಂದಾಗುತ್ತಿದ್ದೇವೆ. ಎಲ್ಲರೂ ಸೇರಿ ಸಂಘವನ್ನು ಇನ್ನಷ್ಟು ಸದೃಢಗೊ ಳಿಸೋಣ ಎಂದರು. ಲೆಕ್ಕಪತ್ರ ಮಂಡಿಸಿ ಸಭೆಯ ಅನುಮೋದನೆ ಪಡೆಯಲಾಯಿತು. ಸಂಘದ ಮುಂದಿನ ಕಾರ್ಯಯೋಜನೆಯ ಬಗ್ಗೆ ಚರ್ಚಿಸಿ ನಿರ್ಣಯಿಸಲಾಯಿತು. ಸಂಘದ ಉಪಾಧ್ಯಕ್ಷ ಪ್ರವೀಣ್ ಚೆನ್ನಾವರ ಸ್ವಾಗತಿಸಿ, ವಂದಿಸಿದರು.

Also Read  ಪುತ್ತೂರು: ಕುಡಿದ ಮತ್ತಿನಲ್ಲಿ ತಮ್ಮನನ್ನು ಕೊಂದ ಅಣ್ಣ ➤ ಆರೋಪಿ ಪರಾರಿ

error: Content is protected !!
Scroll to Top