ಬಾಡಿಗೆ ಮನೆಯಲ್ಲಿ ವಿದ್ಯಾರ್ಥಿ ನೇಣಿಗೆ ಶರಣು ➤ಶವ ನೋಡಿದ ಮನೆಯ ಮಾಲೀಕ ಹೃದಯಾಘಾತ ದಿಂದ ಮೃತ್ಯು..!

(ನ್ಯೂಸ್ ಕಡಬ) newskadaba.com. ರಾಜಸ್ಥಾನ,ಮಾ 16.  ಪರೀಕ್ಷೆಯ ಒತ್ತಡದ ಕಾರಣ ಬಾಡಿಗೆ ಮನೆಯಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ನೋಡಿದ ಮನೆಯ ಮಾಲೀಕ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಧೋಲ್ ಪುರ್ ಜಿಲ್ಲೆಯಲ್ಲಿ ನಡೆದಿದೆ. ಧೋಲ್‌ಪುರದ ಮಾಧವಾನಂದ ಕಾಲೋನಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾ ಬಾಡಿಗೆ ಮನೆಯೊಂದರಲ್ಲಿದ್ದ ಪುಷ್ಪೇಂದ್ರ ರಜಪೂತ್ (17) ಬುಧವಾರ ತನ್ನ ಊರಿನಿಂದ ಹಿಂತಿರುಗಿದ ನಂತರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಠಡಿಯಲ್ಲಿ ಶವ ನೇತಾಡುತ್ತಿದ್ದನ್ನು ನೋಡಿ ಮನೆ ಮಾಲೀಕ ಬಹದ್ದೂರ್ ಸಿಂಗ್ (70) ಸಹಾಯಕ್ಕಾಗಿ ಕಿರುಚಿದ್ದಾರೆ. ನಂತರ ಅವರ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟು ಕುಸಿದುಬಿದ್ದಿರುವುದಾಗಿ ಎಂದು ಪೊಲೀಸರು ತಿಳಿಸಿದ್ದಾರೆ.

Also Read  ದ್ವಿಚಕ್ರ ವಾಹನದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ !      ➤  ಓರ್ವ ಆರೋಪಿಯ ಬಂಧನ

ವಿದ್ಯಾರ್ಥಿಯ ಕೊಠಡಿಯಿಂದ ಸೂಸೈಡ್ ನೋಟ್ ವಶಪಡಿಸಿಕೊಳ್ಳಲಾಗಿದೆ. ಮನೆ ಮಾಲೀಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಶವವನ್ನು ಆಸ್ಪತ್ರೆಯ ಶವಗಾರಾದಲ್ಲಿ ಇಡಲಾಗಿದೆ ಎಂದು ನಿಹಾಲ್ ಗಂಜ್ ಠಾಣಾಧಿಕಾರಿ ವಿಜಯ್ ಮೀನಾ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುವುದು, ಸಿಆರ್ ಸಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

error: Content is protected !!
Scroll to Top