ಈಜಲು ಹೋದ ಬಾಲಕ ನೀರುಪಾಲು

(ನ್ಯೂಸ್ ಕಡಬ)newskadaba.com ಚಿಕ್ಕಬಳ್ಳಾಪುರ, ಮಾ.16. ಸ್ನೇಹಿತರ ಜೊತೆ ಈಜಲು ತೆರಳಿದ ಬಾಲಕ ನೀರುಪಾಲಾದ ಘಟನೆ ಕೌರನಹಳ್ಳಿ ಬಳಿ ನಡೆದಿದೆ.

ಬೆಂಗಳೂರಿನ ರಾಜಾಜಿನಗರದ ಮನೋಜ್ (17) ಮೃತ ಬಾಲಕ.ಬೆಂಗಳೂರಿನಿಂದ 10 ಸ್ನೇಹಿತರು ಜೊತೆಯಾಗಿ ಈಶ ಫೌಂಡೇಶನ್‌ನ ಆದಿಯೋಗಿ ಪ್ರತಿಮೆ ವೀಕ್ಷಿಸಲು ಚಿಕ್ಕಬಳ್ಳಾಪುರಕ್ಕೆ ತೆರಳಿದ್ದರು.

ಪ್ರತಿಮೆ ವೀಕ್ಷಣೆ ಬಳಿಕ ವಾಪಸಾಗುವಾಗ ಕೌರನಹಳ್ಳಿ ಬಳಿ ಕಲ್ಲು ಕ್ವಾರಿಯನ್ನು ಕಂಡಿದ್ದಾರೆ. ಅಲ್ಲಿ ನೀರಿನಲ್ಲಿ ಈಜಲು ಇಳಿದಿದ್ದಾರೆ. ಈ ವೇಳೆ ಬಾಲಕ ಮನೋಜ್‌ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

 

 

Scroll to Top