ಶೌಚಾಗಾರ ಹಾಗೂ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯ ಕೊಳೆತ ಶವ ಪತ್ತೆ ➤ 22 ವರ್ಷದ ಪುತ್ರಿಯ ಬಂಧನ

crime, arrest, suspected

(ನ್ಯೂಸ್ ಕಡಬ) newskadaba.com ಮುಂಬೈ, ಮಾ. 16. ಶೌಚಾಗಾರ ಹಾಗೂ ನೀರಿನ ಟ್ಯಾಂಕ್‌ನಲ್ಲಿ ಮಹಿಳೆಯೊಬ್ಬರ ದೇಹದ ಕೊಳೆತ ಭಾಗಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆಕೆಯ ಪುತ್ರಿಯನ್ನು ಬಂಧಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.


ಮೃತ ಮಹಿಳೆಯನ್ನು ವೀಣಾ ಪ್ರಕಾಶ್ ಜೈನ್ (53) ಎಂದು ಗುರುತಿಸಲಾಗಿದೆ. ಶಂಕಿತ ಆರೋಪಿ ಆಕೆಯ ಪುತ್ರಿ 22 ವರ್ಷದ ಯುವತಿಯನ್ನು ಕಾಲಾಚೌಕಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಮಹಿಳೆಯ ಕೈ ಮತ್ತು ಕಾಲುಗಳನ್ನು ಆಯುಧದಿಂದ ಕತ್ತರಿಸಿ, ಬಳಿಕ ಮೃತದೇಹವನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಮನೆಯ ಕಪಾಟಿನೊಳಗೆ ಇಡಲಾಗಿತ್ತು. ಅಲ್ಲದೇ ಶೌಚಾಗಾರ ಹಾಗೂ ನೀರಿನ ಟ್ಯಾಂಕ್‌ನಲ್ಲಿ ದೇಹದ ಕೊಳೆತ ಭಾಗಗಳು ಪತ್ತೆಯಾಗಿದ್ದವು. ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

Also Read  ಕನ್ನಡದ ಹಿರಿಯ ಪತ್ರಕರ್ತ ವಸಂತ ನಾಡಿಗೇರ ಮೃತ್ಯು

error: Content is protected !!
Scroll to Top