ಕಾರಿನಿಂದ ನೋಟು ಎಸೆದು ರೀಲ್ಸ್ ➤ ಯೂಟ್ಯೂಬರ್ ಜೈಲುಪಾಲು

(ನ್ಯೂಸ್ ಕಡಬ) newskadaba.com ಗುರುಗ್ರಾಮ್,  ಮಾ. 15.  ವೆಬ್ ಸೀರೀಸ್‌ನಿಂದ ಪ್ರೇರಣೆ ಪಡೆದು ಚಲಿಸುತ್ತಿರುವ ಕಾರಿನಿಂದ ನೋಟು ಎಸೆದು ಯೂಟ್ಯೂಬರ್ ಸಹಿತ ಇಬ್ಬರು ಜೈಲು ಪಾಲಾದ ಘಟನೆ ಗುರುಗ್ರಾಮ್‌ನಲ್ಲಿ ನಡೆದಿದೆ.

ಬಂಧಿತರನ್ನು ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಗುರುಗ್ರಾಮ್‌ನ ಡಿಎಲ್‌ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಮಾರ್ಚ್ 02ರಂದು ಕಾರನ್ನು ಅಪಾಯಕಾರಿಯಾಗಿ ಚಲಾಯಿಸುತ್ತಾ ಹಿಂಬದಿಯಿಂದ ನೋಟುಗಳನ್ನು ಎಸೆಯುತ್ತಿದ್ದರು. ಇವರು ಶಾಹಿದ್‌ ಕಪೂರ್‌, ಕೆಕೆ ಮೆನನ್‌ ಅಭಿನಯದ ʼಫರ್ಜಿʼ ವೆಬ್‌ ಸಿರೀಸ್‌ ನ ರೀ ಕ್ರಿಯೇಟ್ ದೃಶ್ಯವನ್ನಾಗಿ ಮಾಡಿ ರೀಲ್ಸ್ ಮಾಡುವ ಉದ್ದೇಶದಿಂದ ಈ ಕೃತ್ಯವೆಸಗಿದ್ದರು. ಕಾರಿನಿಂದ ನೋಟು ಎಸೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ವೀಡಿಯೋವನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಪೊಲೀಸರು ಇಬ್ಬರ ಮೇಲೆ ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯವನ್ನುಂಟು‌ ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ದೂರು ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ.

Also Read  ವೆನ್ ಲಾಕ್ ➤ ನಾಡೋಜ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಉಡುಪಿ ವತಿಯಿಂದ ಸನ್ಮಾನ ಕಾರ್ಯಕ್ರಮ

error: Content is protected !!
Scroll to Top