(ನ್ಯೂಸ್ ಕಡಬ) newskadaba.com ಮಂಗಳೂರು, ಮಾ. 14. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ನಡೆಸಿದ ಎಂ ಫಾರ್ಮ, ಫಾರ್ಮ ಡಿ ಮತ್ತು ಫಾರ್ಮ ಬಿ ಪರೀಕ್ಷೆಯಲ್ಲಿ ಮಂಗಳೂರಿನ ಶ್ರೀ ದೇವಿ ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಮೇಲುಗೈ ಸಾಧಿಸಿದ್ದಾರೆ. ಎಂ ಫಾರ್ಮ್ ಪರೀಕ್ಷೆಯಲ್ಲಿ 2 ರ್ಯಾಂಕ್, ಫಾರ್ಮ್ ಡಿ ಪರೀಕ್ಷೆಯಲ್ಲಿ 3 ರ್ಯಾಂಕ್ ಹಾಗೂ ಬಿ. ಫಾರ್ಮ್ ಪರೀಕ್ಷೆಯಲ್ಲಿ 2 ರ್ಯಾಂಕ್ ಲಭಿಸಿದೆ.
ಒಟ್ಟು 2 ವರ್ಷದ ಎಂ. ಫಾರ್ಮ ಫಾರ್ಮಕಾಲಜಿ ವಿಭಾಗದಲ್ಲಿ ಪ್ರವೀಣ್ ರಾಜ್ 2ನೇ ರ್ಯಾಂಕ್ ಹಾಗೂ ಸೂರಜ್ 3ನೇ ರ್ಯಾಂಕ್, ಫಾರ್ಮ.ಡಿ(ಪೋಸ್ಟ್ ಬ್ಯಾಕಲರೇಟ್) ವಿದ್ಯಾರ್ಥಿನಿಯಾದ ಪ್ರಿಯಾಂಕ ಒಟ್ಟು 2 ವರ್ಷದ ಫಾರ್ಮ ಡಿ ಪದವಿಯಲ್ಲಿ 8ನೇ ರ್ಯಾಂಕ್, 1ನೇ ವರ್ಷದ ಪದವಿಯಲ್ಲಿ 4ನೇ ರ್ಯಾಂಕ್, 2ನೇ ವರ್ಷದ ಪದವಿ ಪರೀಕ್ಷೆಯಲ್ಲಿ 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಮತ್ತು ಪ್ರಥಮ ವರ್ಷದ ಬಿ ಫಾರ್ಮ ಪದವಿ ಪರೀಕ್ಷೆಯಲ್ಲಿ ಅನಿಶಾ 9ನೇ ರ್ಯಾಂಕ್, ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಸಿರಾಜುನ್ನಿಸ 9ನೇ ರ್ಯಾಂಕ್ ಪಡೆದುಕೊಂಡಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ. ವಿದ್ಯಾರ್ಥಿನಿಯರ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಶಿಕ್ಷಕ ಶಿಕ್ಷಕೇತರ ವರ್ಗದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.