ಸಾರಂಗವನ್ನು ಕೊಂದು ಹಾಕಿದ ನಾಯಿಗಳ ಗುಂಪು

(ನ್ಯೂಸ್ ಕಡಬ) newskadaba.com ಚಿತ್ರದುರ್ಗ, ಮಾ. 09. ಚಿತ್ರದುರ್ಗ ಸಮೀಪದ ಅರಣ್ಯದಿಂದ ದಾರಿ ತಪ್ಪಿ ವಸತಿ ಪ್ರದೇಶಕ್ಕೆ ಬಂದ ಸಾರಂಗವನ್ನು ಬೀದಿ ನಾಯಿಗಳ ಗುಂಪೊಂದು ಕೊಂದು ಹಾಕಿರುವ ಘಟನೆ ನಡೆದಿದೆ.

 

ಸಾರಂಗದ ಮೇಲೆ ನಾಯಿಗಳ ದಾಳಿಯನ್ನು ಗಮನಿಸಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸಾರಂಗವನ್ನು ರಕ್ಷಿಸಿದ್ದಾರೆ. ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರಾದರೂ ಚಿಕಿತ್ಸೆಗೆ ಸ್ಪಂದಿಸದೆ ಸಾರಂಗ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.

Scroll to Top