(ನ್ಯೂಸ್ ಕಡಬ) newskadaba.com ವೀರಾಜಪೇಟೆ, ಮಾ. 09. ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಣತಿ ಹೊಂದಿದ ಜ್ಯೋತಿಷ್ಯರೋರ್ವರು ಜ್ಯೋತಿಷ್ಯ ಕೇಳಲು ಬಂದ ಮಹಿಳೆಯೊಂದಿಗೆ ಅಸಭ್ಯ ವರ್ತನೆ ಮಾಡಿರುವ ಕುರಿತು ನೊಂದ ಮಹಿಳೆಯು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
. ಆರೋಪಿಯನ್ನು ಕದನೂರು ಗ್ರಾಮದಲ್ಲಿ ಶ್ರೀ ಮಂಜುನಾಥ ಜ್ಯೋತಿಷ್ಯಾಲಯವನ್ನು ನಡೆಸುತ್ತಿರುವ ಹೆಚ್.ಎಂ. ಪ್ರಕಾಶ್ (53) ಎಂದು ಗುರುತಿಸಲಾಗಿದೆ. ಈತನ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.