ಫೋನ್ ರಿಸೀವ್ ಮಾಡಿಲ್ಲ ಎಂದು ಮಹಿಳೆಯನ್ನೇ ಕೊಲೆಗೈದ ಕ್ಯಾಬ್ ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಾ. 09. ಫೋನ್‌ ರಿಸೀವ್‌ ಮಾಡದೇ ಇದ್ದುದಕ್ಕೆ ಕ್ಯಾಬ್‌ ಚಾಲಕನೋರ್ವ ಕೆಲ ತಿಂಗಳಿಂದ ಪರಿಚಯವಾಗಿದ್ದ ಮಹಿಳೆಯನ್ನು ಕೊಲೆ ಮಾಡಿ, ಮೃತದೇಹವನ್ನು ಚರಂಡಿಗೆಸೆದಿರುವ ಭಯಾನಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಕೊಲೆಯಾದವರನ್ನು ದೀಪಾ ಎಂದು ಗುರುತಿಸಲಾಗಿದೆ. ಕ್ಯಾಬ್‌ ಚಾಲಕ ಭೀಮರಾಯ ಅಲಿಯಾಸ್ ಭೀಮಾ ಕೊಲೆ ಆರೋಪಿ. ವೃತ್ತಿಯಲ್ಲಿ ಕ್ಯಾಬ್‌ ಚಾಲಕನಾಗಿದ್ದ ಭೀಮಾ, ಕ್ಷುಲ್ಲಕ ಕಾರಣಕ್ಕೆ ದೀಪಾ ಎಂಬವರನ್ನು ಕತ್ತು ಹಿಸುಕಿ ಕೊಂದು ಮೃತದೇಹವನ್ನು ಚರಂಡಿಗೆಸೆದಿದ್ದಾನೆ. ಸಾರ್ವಜನಿಕರು ಕೊಳೆತ ಶವದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಇತ್ತ ದೀಪಾ.ಜಿ ಫೋನ್‌ ಸ್ವಿಚ್‌ಆಫ್‌ ಆಗಿದ್ದು, ಆಕೆ ಕಾಣಿಸದೇ ಇದ್ದ ವೇಳೆ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದರು.

Also Read  ಉಡುಪಿ: ಹದಿಹರೆಯದ ಯುವತಿ ನಾಪತ್ತೆ ➤ ದೂರು ದಾಖಲು

error: Content is protected !!
Scroll to Top