ಬಂಟ್ವಾಳ: ನಿಲ್ಲಿಸಿದ್ದ ಆಟೋ ಕದ್ದೊಯ್ದ ಕಳ್ಳರು..!

Theft, crime, Robbery

(ನ್ಯೂಸ್ ಕಡಬ) newskadaba.com ಬಂಟ್ವಾಳ, ಮಾ. 09. ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದ ವ್ಯಕ್ತಿಯೋರ್ವರ ಆಟೋ ರಿಕ್ಷಾವನ್ನು ಹಾಡುಹಗಲೇ ಕಳ್ಳರು ಕದ್ದೊಯ್ದ ಘಟನೆ ಬಿಸಿರೋಡ್ ನಲ್ಲಿ ನಡೆದಿದೆ.

400 ಕೆವಿ ವಿದ್ಯುತ್ ಮಾರ್ಗವನ್ನು ವಿರೋಧಿಸಿ ಬಂಟ್ವಾಳ ತಾಲೂಕು ಕಛೇರಿ ಎದುರು ರೈತಸಂಘವು ಆಯೋಜಿಸಿದ್ದ ಪ್ರತಿಭಟನೆಗೆ ಬಂದ ವಿಟ್ಲದ ವ್ಯಕ್ತಿಯೋರ್ವರು ಬಿಸಿರೋಡ್ ಲಯನ್ಸ್ ಕ್ಲಬ್ ಭವನದ ಬಳಿ ತನ್ನ ಆಟೋವನ್ನು ನಿಲ್ಲಿಸಿದ್ದರು. ಬಳಿಕ ಪ್ರತಿಭಟನೆ ಮುಗಿಸಿ ಹಿಂತಿರುಗಿ ಬಂದು ನೋಡಿದಾಗ ಆಟೋ ಕಾಣದೇ ಇದ್ದು ಯಾರೋ ಕಿಡಿಗೇಡಿಗಳು ಕಳವುಗೈದಿದ್ದಾರೆ ಎಂದು ಶಂಕಿಸಲಾಗಿದೆ. ಈ ಕುರಿತು ವಿಟ್ಲದ ಯೋಗಿಶ್ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Also Read  ಎಸ್‌ವೈ‌ಎಸ್ ಮಾಣಿ ಸರ್ಕಲ್ ವತಿಯಿಂದ 'ವಿಶ್ವ ಪರಿಸರ ದಿನಾಚರಣೆ'

error: Content is protected !!
Scroll to Top