ಕುಟ್ರುಪ್ಪಾಡಿ ಗ್ರಾ.ಪಂ.ನ ವತಿಯಿಂದ ► ಬಲ್ಯ ದೇರಾಜೆಯಲ್ಲಿ ಸ್ವಚ್ಚತೆಯೊಂದಿಗೆ ಹೊಸ ವರ್ಷಾಚರಣೆ

(ನ್ಯೂಸ್ ಕಡಬ) newskadaba.com ಕಡಬ, ಜ.02. ಕುಟ್ರುಪ್ಪಾಡಿ ಗ್ರಾ.ಪಂ.ನ ವತಿಯಿಂದ ಬಲ್ಯ ಗ್ರಾಮದ ದೇರಾಜೆಯಲ್ಲಿ 2018ನೇ ಜನವರಿ 1 ರಂದು ಅಂಗಡಿ ಮುಂಗಟ್ಟುಗಳು, ಬಸ್ಸ್ಟಾಂಡ್, ಮಸೀದಿ ವಠಾರ ಸೇರಿದಂತೆ ಪರಿಸರ ಸ್ವಚ್ಚಗೋಲಿಸುವ ಮೂಲಕ ಹೊಸವರ್ಷಾಚರಣೆ ಆಚರಿಸಲಾಯಿತು.

ಕುಟ್ರುಪ್ಪಾಡಿ ಗ್ರಾ.ಪಂ.ನ ಬಲ್ಯ ವಾರ್ಡ್ನ ಸದಸ್ಯ ಮಹಮ್ಮದ್ ಆಲಿಯವರ ನೇತೃತ್ವದಲ್ಲಿ ನಡೆದ ಸ್ವಚ್ಚತಾ ಕಾರ್ಯಕ್ರಮದಲ್ಲಿ ಕುಟ್ರುಪ್ಪಾಡಿ ಗ್ರಾ.ಪಂ.ಅಧ್ಯಕ್ಷೆ ಜಾನಕಿಸುಂದರ ಗೌಡ, ಸದಸ್ಯರಾದ ತನಿಯಪ್ಪ ಸಂಪಡ್ಕ, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಧೀರ್ ದೇವಾಡಿಗ, ದೇರಾಜೆ ಅಂಗಡಿ ಮಾಲಕ ಗೋಪಾಲಕೃಷ್ಣ, ಹೋಟೆಲ್ ಮಾಲಕ ಮೋಹನ್, ಉದ್ಯಮಿ ಕೆ.ಕೆ ಕರೀಂ ಹೊಸ್ಮಠ, ಅವೀನ್ ಬಂಗೇರ, ಸುಧಾಕರ ದೇವಾಡಿಗ, ಆಟೋಮಾಲಕ ಚಂದ್ರಶೇಖರ, ಶೀನ ಕೊಲ್ಲಿಮಾರ್, ಅಚ್ಚುತ ಪಡ್ನೂರು, ಇಸ್ಮಾಯಿಲ್, ಸತ್ತಾರ್, ಅನ್ಸಾರ್, ರಫಿಕ್, ಸಂತೋಷ್ ದೇವಾಡಿಗ, ತುಕಾರಾಮ, ಸುಖೇಶ್, ರಾಧಾಕೃಷ್ಣ ದೇವಾಡಿಗ, ನಝೀರ್, ಫಾರೂಕ್, ಶೇಷಪ್ಪ ದೇವಾಡಿಗ, ಹರೀಶ್ ಭಂಡಾರಿ, ಹನೀಫ್, ನಂದಕುಮಾರ್, ಬಾಲಕೃಷ್ಣ ಸಂಪಡ್ಕ, ವಸಂತ ಶೆಟ್ಟಿ ಕತ್ತರಿಗುಡ್ಡೆ, ವಿ.ಕೆ.ಅಬ್ದುಲ್ಲ ಮೊದಲಾದವರು ಸ್ವಚ್ಚತೆಯಲ್ಲಿ ಪಾಲ್ಗೊಂಡರು.

Also Read  •ಬೆಳ್ತಂಗಡಿ: ಕಳೆದ ವರ್ಷದ ಪ್ರವಾಹ ಸಂದರ್ಭ ಸಂಗ್ರಹವಾದ ಹಣದ ಲೆಕ್ಕ ನೀಡುವಂತೆ ಕಾಂಗ್ರೆಸ್ ಒತ್ತಾಯ - ಹರೀಶ್ ಪೂಂಜಾ ಕಛೇರಿ ಎದುರು ಪ್ರತಿಭಟನೆ

error: Content is protected !!
Scroll to Top