ನಾಪತ್ತೆಯಾಗಿದ್ದ ಮಹಿಳೆ ಮೃತದೇಹ ಪತ್ತೆ…!      ➤  ಪತಿಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

(ನ್ಯೂಸ್ ಕಡಬ)newskadaba.com ಮೂಡಿಗೆರೆ, ಮಾ.07. 3 ದಿನದ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ ಜಗದೀಶ್ ಆಚಾರ್ ಅವರ ಪತ್ನಿ ನೇತ್ರಾ ಅವರ ಶವ ಸೋಮವಾರ ಕಾಫಿ ತೋಟವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇತ್ತೀಚೆಗೆ ಕಳೆನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಜಗದೀಶ್ ಆಚಾರ್ ಚಿಕಿತ್ಸೆ ಫಲಕಾರಿಯಾಗದೇ ಮಾ.3ರಂದು ಕೊನೆಯುಸಿರೆಳೆದಿದ್ದರು. ಈ ಬಗ್ಗೆ ಗೋಣಿಬೀಡು ಠಾಣೆಗೆ ದೂರು ನೀಡಿದ್ದ ಜಗದೀಶ್ ಆಚಾರ್ ತಾಯಿ ಯಶೋಧಮ್ಮ, ನನ್ನ ಮಗನ ಸಾವಿಗೆ ಆತನ ಹೆಂಡತಿ ನೇತ್ರಾ ಮತ್ತು ಆಕೆಯ ಪ್ರಿಯಕರ ಧನಂಜಯ ಅವರ ನಡುವಿನ ಅಕ್ರಮ ಸಂಬಂಧವೇ ಕಾರಣ. ಘಟನೆಯಿಂದ ಮನನೊಂದು ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದ್ದರಿಂದ ನೇತ್ರಾ ಮತ್ತು ಧನಂಜಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗೋಣಿಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.

Also Read  ವರ್ಷದಿಂದ ವರ್ಷಕ್ಕೆ ರಾಜ್ಯದಲ್ಲಿ ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿದೆ      ➤ ಆರಗ ಜ್ಞಾನೇಂದ್ರ…!

 

error: Content is protected !!
Scroll to Top