ಪಿಜಕಳ: ವಿದ್ಯುತ್ ಲೈನ್ ಮತ್ತು ಟ್ರಾನ್ಸ್‌ಫಾರ್ಮರ್ ಬದಲಾಯಿಸಲು ಮೆಸ್ಕಾಂಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜ.02. ವಿದ್ಯುತ್ ಪರಿವರ್ತಕದ ಬಳಕೆದಾರರಿಂದ ಕಡಬ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ವಿದ್ಯುತ್ ಸಮಸ್ಯೆಯ ಬಗ್ಗೆ ಜ.1ರಂದು ಮನವಿ ಸಲ್ಲಿಸಿ ಹಳೆಯ ಟ್ರಾನ್ಸ್‌ಫಾರ್ಮರ್ ಹಾಗು ಲೈನನ್ನು ಬದಲಾಯಿಸಿ ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.

ಕಡಬ ಪಿಜಕಳ-ಕಲ್ಲರ್ಪೆ ಟಿ.ಸಿ ಯಿಂದ ಕಳೆದ ಹಲವು ವರ್ಷಗಳಿಂದ ವಿದ್ಯುತ್ ವೋಲ್ಟೇಜ್ ಸಮಸ್ಯೆಯನ್ನು ಎದುರಿಸುತ್ತಿದ್ದು ಟಿ.ಸಿ ಮತ್ತು ಅದರಿಂದ ವಿದ್ಯುತ್ ಪುರೈಕೆಯಾಗುತ್ತಿರುವ ಲೈನ್ 25 ವರ್ಷಗಳ ಹಿಂದೆ ಅಳವಡಿಸಲಾಗಿದ್ದು ತುಕ್ಕುಹಿಡಿದು ಪದೇ ಪದೇ ತುಂಡಾಗಿ ಬೀಳುತ್ತಿದ್ದು ಇದರಿಂದ ಈ ಪರಿಸರದ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಸಾಕು ಪ್ರಾಣಿಗಳಿಗೆ ಅಪಾಯಕಾರಿ ಪರಿಸ್ಥಿತಿ ಉಂಟಾಗಿದೆ. ಅಪಾಯಕಾರಿ ಹಳೆಯ ವಿದ್ಯುತ್ ಲೈನ್ ಮತ್ತು ಟಿ.ಸಿ ಬದಲಾಯಿಸಿ ಹೊಸ ಲೈನ್ ಅಳವಡಿಸಿ ಸಮಸ್ಯೆ ಬಗೆಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

Also Read  ಮಂಗಳೂರು: ಹೂಡಿಕೆ ಮಾಡಿಸಿಕೊಂಡು ವಂಚನೆ   ➤ 10.25 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ನಿವೃತ್ತ ಶಿಕ್ಷಕ ಸಾಂತಪ್ಪ ಗೌಡ ಪಿಜಕಳ, ಜೀವನ್ಪ್ರಕಾಶ್, ಎಲ್ಯಣ್ಣ ಗೌಡ ಪುಜಾರಿಮನೆ, ಆನಂದ ಗೌಡ ಕೋಂಕ್ಯಾಡಿ, ಯತೀಂದ್ರ ಗೌಡ, ದಯಾನಂದ ಗೌಡ, ಗಣೇಶ್, ಸದಾನಂದ ಗೌಡ, ಮೇದಪ್ಪ ಪುಜಾರಿ, ಸುಂದರ ಗೌಡ ಪಿಜಕಳ, ಕಾರ್ತಿಕ್ ಪಿ.ಎಸ್, ವೈಶಾಲಿ, ಪೆರ್ಗಡೆ ಗೌಡ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top