ಬೆಳ್ಳಾರೆ: ಗೋಡೆ ಕುಸಿತ ➤ ಕಾರ್ಮಿಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ಳಾರೆ, ಮಾ. 07. ಇಲ್ಲಿನ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡವನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಕಾರ್ಮಿಕನೋರ್ವ ಮೃತಪಟ್ಟ ಘಟನೆ ಬೆಳ್ಳಾರೆಯಲ್ಲಿ ನಡೆದಿದೆ.

ಮೃತ ಕಾರ್ಮಿಕನನ್ನು ಮಂಜುನಾಥ(23) ಎಂದು ಗುರುತಿಸಲಾಗಿದೆ. ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆ ಹಳೆ ಕಟ್ಟಡವನ್ನು ಕೆಡವು ಕಾರ್ಯಾಚರಣೆ ನಡೆಯುತ್ತಿತ್ತು. ಗೋಡೆ ಕೆಡವುತ್ತಿದ್ದ ಸಂದರ್ಭ ಕಾರ್ಮಿಕ ಮಂಜುನಾಥ ಎಂಬವರ ಮೇಲೆ ಬಿದ್ದಿದ್ದು, ಕಲ್ಲುಗಳ ಅಡಿಗೆ ಸಿಲುಕಿದ ಅವರನ್ನು ಇತರ ಕಾರ್ಮಿಕರು ಹೊರತೆಗೆದು ಕೂಡಲೇ ಸುಳ್ಯ ಆಸ್ಪತ್ರೆಗೆ ಕೊಂಡೊಯ್ದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.

Also Read  ಅತಿಥಿ ಉಪನ್ಯಾಸಕರ ಹುದ್ದೆ - ಅರ್ಜಿ ಆಹ್ವಾನ

error: Content is protected !!