➤ ಕಡಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಹರಡುತ್ತಿರುವ ಬೆಂಕಿ

(ನ್ಯೂಸ್ ಕಡಬ) newskadaba.com. ಬಂಟ್ವಾಳ, ಮಾ 3. ಕಡಬ, ಮಾ 03.  ಕಡಬ ತಾಲೂಕಿನ ನೆಲ್ಯಾಡಿ ಸಮೀಪದಬ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಕಳೆದ ಕೆಲ  ದಿನಗಳಿಂದ ಹರಡುತ್ತಿರುವ ಬೆಂಕಿ ನಿಯಂತ್ರಣಕ್ಕೆ ಬಾರದೆ ಮತ್ತೆ ಮುಂದಕ್ಕೆ ಸಾಗುತ್ತಿದ್ದು, ಬೆಂಕಿ ನಂದಿಸಲು ಗ್ರಾಮಸ್ಥರು, ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.

ಮೂರು ದಿನದ ಹಿಂದೆ ಶಿವಾರು ರಕ್ಷಿತಾರಣ್ಯದ ಹಳೆನೇರೆಂಕಿ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅರಣ್ಯ ಸಿಬ್ಬಂದಿಗಳ ಜೊತೆಗೆ ಗ್ರಾಮಸ್ಥರು ಸಹಕರಿಸಿ ಬೆಂಕಿ ನಂದಿಸಿದ್ದರು. ಆದರೆ ಮರು ದಿನ ಸಂಜೆ ವೇಳೆಗೆ ಮತ್ತೆ ಕಾಡಿನೊಳಗೆ ಬೆಂಕಿ ಕಾಣಿಸಿಕೊಂಡಿದ್ದು ಅರಣ್ಯ, ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದರು. ಆದರೆ ಬೆಂಕಿಯ ಕಿಡಿ ಅಲ್ಲಲ್ಲಿ ಹರಡಿರುವುದರಿಂದ ಬಿಸಿಲು ಹಾಗೂ ಗಾಳಿಗೆ ಮತ್ತೆ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಮಾ.2 ರಂದು ಸಂಜೆ ವೇಳೆಗೆ ಹಳೆನೇರೆಂಕಿ ಗ್ರಾಮದ ಕೆಮ್ಮಿಂಜೆ, ಪಾದ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆ ವ್ಯಾಪಕವಾಗಿ ಹರಡುತ್ತಿದ್ದು ಕಾಡಿನಲ್ಲಿರುವ ಬೆಲೆ ಬಾಳುವ ಮರಗಳು, ಗಿಡಗಂಟಿಗಳು ಆಹುತಿಯಾಗಿವೆ. ಅರಣ್ಯದೊಳಗೆ ಅಗ್ನಿಶಾಮಕ ವಾಹನ ಸಂಚಾರಕ್ಕೆ ಮಾರ್ಗವೂ ಇಲ್ಲದೇ ಇರುವುದರಿಂದ ಬೆಂಕಿ ನಂದಿಸಲು ಪರದಾಡುವಂತಾಗಿದೆ.

error: Content is protected !!
Scroll to Top