ಬೆಂಗಳೂರು: ನಿವೃತ್ತ ಮಹಿಳಾ ಸರ ದೋಚಿದ್ದ ಖದೀಮನ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.02. ಇತ್ತೀಚಿಗೆ ನಿವೃತ್ತ ಮಹಿಳಾ ಪೊಲೀಸ್‌ ಇನ್ಸ್ ಪೆಕ್ಟರ್‌ವೊಬ್ಬರಿಂದ ಚಿನ್ನದ ಸರ ದೋಚಿದ್ದ ಚಾಲಾಕಿ ಖದೀಮನೊಬ್ಬ ಚಂದ್ರಾಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.


ಉಲ್ಲಾಳ ನಿವಾಸಿ ದರ್ಶನ್‌ ಬಂಧಿತನಾಗಿದ್ದು, ಆರೋಪಿಯಿಂದ 3 ಲಕ್ಷ ರು ಮೌಲ್ಯದ 76.4 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಇತ್ತೀಚಿಗೆ ಮೂಡಲಪಾಳ್ಯ ಮುಖ್ಯರಸ್ತೆಯ ಕೆನರಾ ಬ್ಯಾಂಕ್‌ ಕಾಲೋನಿ ನಿವಾಸಿ ನಿವೃತ್ತ ಪೊಲೀಸ್‌ ಇನ್ಸ್‌ಪೆಕ್ಟರ್‌ ಗೀತಾರೆಡ್ಡಿ ಅವರು ಮನೆ ಮುಂದೆ ಕಸ ಗುಡಿಸುವಾಗ ಸರ ಕಳವು ಮಾಡಿ ಕಿಡಿಗೇಡಿ ಪರಾರಿಯಾಗಿದ್ದ.

Also Read  ಕ್ವಾರಂಟೈನ್ ನಲ್ಲಿರುವವರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅವಕಾಶವಿಲ್ಲ..! ➤ ಶಿಕ್ಷಣ ಸಚಿವ ಸುರೇಶ್ ಕುಮಾರ್

error: Content is protected !!