(ನ್ಯೂಸ್ ಕಡಬ) newskadaba.com. ಮೈಸೂರ್. ಫೆ.28. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅನಾರೋಗ್ಯದ ಹಿನ್ನೆಲೆಯಲ್ಲಿ ಎಐಸಿಸಿ, ಕೆಪಿಸಿಸಿ ಗೆ ಪತ್ರ ಬರೆದು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ.
ಹೀಗಾಗಿ ನೂರಾರು ಬೆಂಬಲಿಗರು ತನ್ವೀರ್ ಸೇಠ್ ಮನೆ ಮುಂದೆ ದೊಡ್ಡ ಹೈಡ್ರಾಮಾವನ್ನೇ ಮಾಡಿದ್ದಾರೆ. ಶಾಸಕ ತನ್ವೀರ್ ಸೇಠ್ ರಾಜಕೀಯ ನಿವೃತ್ತಿ ಘೋಷಣೆ ಮಾಡದಂತೆ ಅವರ ಬೆಂಬಲಿಗರು ಒತ್ತಡ ಹಾಕಿದ್ರು. ಈ ವೇಳೆ ಕೆಲವರು ಬಟ್ಟೆ ಬಿಚ್ಚಿ ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಇನ್ನು ಸ್ಥಳದಲ್ಲಿ ಬಿಗುವಿನ ವಾತವರಣ ಏರ್ಪಟ್ಟಿದ್ದು, ಬೆಂಬಲಿಗರ ಮನವಿಗೆ ಶಾಸಕ ತನ್ವೀರ್ ಸೇಠ್ ಜಗ್ಗತ್ತಿಲ್ಲ ಎಂದು ತಿಳಿದು ಬಂದಿದೆ.