ಪುತ್ತೂರು: ಗೂಡಂಗಡಿಗೆ ಅಬಕಾರಿ ಅಧಿಕಾರಿಗಳಿಂದ ದಾಳಿ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 28. ಗೂಡಂಗಡಿಯೊಂದಕ್ಕೆ ದಾಳಿ ನಡೆಸಿದ ಅಬಕಾರಿ ಇಲಾಖಾ ಅಧಿಕಾರಿಗಳು ಮದ್ಯ ವಶಕ್ಕೆ ಪಡೆದ ಘಟನೆ ಮುರ ರೈಲ್ವೇ ಗೇಟ್ ಬಳಿ ನಡೆದಿದೆ.

ಗೂಡಂಗಡಿಗೆ ದಾಳಿ ನಡೆಸಿದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಮದ್ಯ ತುಂಬಿಸಿಡಲಾದ ಬಾಟಲಿಗಳು ಪತ್ತೆಯಾಗಿವೆ. ಆದರೆ ಅಧಿಕ ಪ್ರಮಾಣದ ಮದ್ಯ ಇರದ ಹಿನ್ನೆಲೆ ಕಾನೂನು ಕ್ರಮ ಕೈಗೊಳ್ಳುವ ದೃಷ್ಟಿಯಿಂದ ದಂಡ ವಿಧಿಸಿ ಬಿಡಲಾಗಿದೆ ಎಂದು ತಿಳಿದುಬಂದಿದೆ.

Scroll to Top