ಹಗ್ಗ ಜಗ್ಗಾಟ ಸ್ಪರ್ಧೆಯ ವೇಳೆ ಹೃದಯಾಘಾತ ➤ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com. ಮಂಗಳೂರು .  ಫೆ.28. ಮಂಗಳೂರು  ಬಂಟರ  ಸಂಘದ ವತಿಯಿಂದ  ಏರ್ಪಡಿಸಿದ್ದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರಿಯಲ್ ಎಸ್ಟೇಟ್  ಉದ್ಯಮಿ ಹೃದಯಾಘಾತದಿಂದ ಮೃತಪಟ್ಟ  ಘಟನೆ ನಡೆದಿದೆ.

ಕಾರ್ಯಕಾರಿ ಸಮಿತಿ ಸದಸ್ಯ ಕುಶಲನಾಥ ಶೆಟ್ಟಿ(50) ಮೃತಪಟ್ಟವರು.  ಸಂಘದ ವತಿಯಿಂದ  ಏರ್ಪಡಿಸಿದ್ದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಇವರು ಪಾಲ್ಗೊಂಡಿದ್ದರು. ಸ್ಪರ್ಧೆಯ ಬಳಿಕ ಇವರಿಗೆ ಎದೆನೋವು ಕಾಣಿಸಿಕೊಂಡಿತು. ಅವರು ಅಸ್ಪತ್ರೆಗೆ  ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

error: Content is protected !!
Scroll to Top