ಬಾವಿಗೆ ಬಿದ್ದ ಯುವಕ- ಅಗ್ನಿಶಾಮಕ ದಳದಿಂದ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರ್ಕಳ, ಫೆ. 26. ಬಾವಿಗೆ ಬಿದ್ದ ಯುವಕನೊಬ್ಬನನ್ನು ಕಾರ್ಕಳ ಅಗ್ನಿ ಶಾಮಕ ದಳವು ರಕ್ಷಿಸಿದ ಘಟನೆ ಅಜೆಕಾರು ಕೈಕಂಬ ಎಂಬಲ್ಲಿ ಭಾನುವಾರದಂದು ಬೆಳಗ್ಗೆ‌ ನಡೆದಿದೆ.

 


ಸುಕುಮಾರ(40) ಎಂಬವರು ಬಾವಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳವು ಸ್ಥಳಕ್ಕೆ ಆಗಮಿಸಿ, ಬಾವಿಗೆ ಬಿದ್ದಿದ್ದ ವ್ಯಕ್ತಿಯನ್ನು ಮೇಲಕ್ಕೆತ್ತಿ ರಕ್ಷಿಸಿದ್ದಾರೆ. ಯುವಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಬಿ.ಎಂ.ಸಂಜೀವ್, ದಪೆದರ್ ಅಚ್ಚುತ ಸಿಬ್ಬಂದಿಗಳಾದ ಚಂದ್ರಶೇಖರ್, ನಿತ್ಯಾನಂದ, ಸುಜಯ್, ಉಮೇಶ್, ವಿನಾಯಕ ಹಾಗೂ ಸಂಜಯ್ ಪಾಲ್ಗೊಂಡಿದ್ದರು.

Also Read  ಕಡಬದ MSIL ಮದ್ಯದಂಗಡಿ ಫುಲ್‌ ರಶ್

error: Content is protected !!
Scroll to Top