ನಿರ್ಮಾಣ ಹಂತದ ಕಟ್ಟಡದ ಗುಂಡಿಗೆ ಬಿದ್ದು 6 ವರ್ಷದ ಮಗು ಮೃತ್ಯು…!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ಬೆಂಗಳೂರಿನಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನಿರ್ಮಾಣ ಹಂತದ ಕಟ್ಟಡದಲ್ಲಿ ಗುಂಡಿಗೆ ಬಿದ್ದು 6 ವರ್ಷದ ಮಗು ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿ ತಡರಾತ್ರಿ ನಿರ್ಮಾಣ ಹಂತದ ಕಟ್ಟಡದಲ್ಲಿ ಲಿಫ್ಟ್ ಗೆಂದು ತೆಗೆದಿದ್ದ ಗುಂಡಿಗೆ ಆಟವಾಡುತ್ತಿದ್ದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಂಗಳೂರಿನ ಸುಲ್ತಾನ್ ಪೇಟೆಯಲ್ಲಿ ಬಿಲ್ಡಿಂಗ್ ಕಾಮಗಾರಿಗಾಗಿ ಬಂದಿದ್ದ ದಂಪತಿ ಮಗು 6 ವರ್ಷದ ಮಹೇಶ್ವರಿ ಸಾವನ್ನಪ್ಪಿದ ಮಗುವಾಗಿದ್ದು, ಸ್ಥಳಕ್ಕೆ ಕೆ.ಆರ್. ಮಾರ್ಕೆಟ್ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Also Read  ಲೈಂಗಿಕ ದೌರ್ಜನ್ಯ ವಿಡಿಯೋ ಬ್ಲಾಕ್ ಮೇಲ್, ಸುಲಿಗೆ ಪ್ರಕರಣ ➤ ಆರು ಮಂದಿ ಬಂಧನ

 

 

error: Content is protected !!
Scroll to Top