ಕಡಬ: ಕಾಡಾನೆ ದಾಳಿಯಿಂದ ಮೃತಪಟ್ಟ ಯಜಮಾನನ ಸಮಾಧಿ ಬಳಿ ನಿತ್ಯ ರೋಧಿಸುತ್ತಿರುವ ನಾಯಿ

(ನ್ಯೂಸ್ ಕಡಬ)newskadaba.com  ಕಡಬ, ಫೆ.23. ನಾಯಿಗೆ ಅನ್ನ ಹಾಕಿದರೆ ಅದು ಎಂದಿಗೂ ಮರೆಯೋದಿಲ್ಲ ಎಂಬ ಮಾತು ವಾಸ್ತವಿಕವಾಗಿ ಸತ್ಯವಾಗಿದ್ದು, ತನಗೆ ತುತ್ತು ಅನ್ನ ನೀಡುತ್ತಿದ್ದ ಯಜಮಾನ ಇಲ್ಲವೆಂಬ ಕೊರಗಿನಲ್ಲಿ ಯಜಮಾನನ ಸಮಾಧಿ ಬಳಿ ನಾಯಿಯ ಮೂಕ ರೋಧನಕ್ಕೆ ಮನಸು ಕರಗುವಂತಾಗಿದೆ.

ಕಡಬದ ಮರ್ದಾಳ ಸಮೀಪ ಕಾಡಾನೆ ದಾಳಿಗೆ  ಇಬ್ಬರು ಪ್ರಾಣ ಕಳೆದುಕೊಂಡಿದ್ದರು. ಸಾಮಾಜಿಕ ಕಾರ್ಯಕರ್ತನಾಗಿ ಗುರತಿಸಿಕೊಂಡಿದ್ದ ಮೃತ ರಮೇಶ್ ರೈ  ಆನೆಯಿಂದ ಯುವತಿಯನ್ನು ರಕ್ಷಣೆ ಮಾಡಲು ಹೋಗಿ ತಾನೂ ಬಲಿಯಾಗಿದ್ದರು. ಬಳಿಕ ಅವರ ಅಂತ್ಯ ಸಂಸ್ಕಾರದ ಸ್ಥಳದಲ್ಲೇ ಅವರ ನಾಯಿ ಕೊರಗಿನಲ್ಲಿ ನಿತ್ಯ ರೋದಿಸುತ್ತಿದೆ ಎಂದು ವರದಿಯಾಗಿದೆ.

Also Read  ಸಸಿಹಿತ್ಲು ಶಾಂಭವಿ ನದಿ ತೀರದಲ್ಲಿ ಅಪರಿಚಿತ ಶವ ಪತ್ತೆ

 

error: Content is protected !!
Scroll to Top