(ನ್ಯೂಸ್ ಕಡಬ)newskadaba.com ನವದೆಹಲಿ, ಫೆ.21. ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ ಎಂದು ಘೋಷಿಸಲ್ಪಟ್ಟ ಅವಧಿಪೂರ್ವ ಜನಿಸಿದ ನವಜಾತ ಹೆಣ್ಣು ಶಿಶುವೊಂದು ಸ್ಮಶಾನಕ್ಕೆ ಕೊಂಡೊಯ್ದ ವೇಳೆ ಜೀವಂತವಿರುವುದು ಗೊತ್ತಾದ ಘಟನೆ ದೆಹಲಿಯಲ್ಲಿ ನಡೆದಿದೆ.
35 ವರ್ಷ ವಯಸ್ಸಿನ 23 ವಾರಗಳ ಗರ್ಭಿಣಿಗೆ ದೆಹಲಿಯ ಎಲ್‌ಎನ್‌ಜೆಪಿ ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿಪೂರ್ವವಾಗಿ ಹೆಣ್ಣು ಶಿಶು ಜನಿಸಿತ್ತು. ಶಿಶುವಿನ ತೂಕ ಕೇವಲ 490 ಗ್ರಾಂ ಇತ್ತು. ಮಗು ಹುಟ್ಟಿದ ಬಳಿಕ ಅದು ಮೃತಪಟ್ಟಿದೆ ಎಂದು ವೈದ್ಯರು ಘೋಷಿಸಿದರು. ಹೀಗಾಗಿ ಅದರ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಕರೆದೊಯ್ಯಲಾಯಿತು. ಅಂತ್ಯಸಂಸ್ಕಾರಕ್ಕೆ ಸಿದ್ದತೆ ನಡೆಸುತ್ತಿದ್ದಾಗ ಮಗು ಜೀವಂತ ಇರುವುದು ಕಂಡು ಬಂದಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.