ಬಿಬಿಸಿ ಆದಾಯಕ್ಕೆ ತಕ್ಕ ತೆರಿಗೆ ಪಾವತಿಸಿಲ್ಲ ➤ ಆದಾಯ ತೆರಿಗೆ ಇಲಾಖೆ ಆರೋಪ

(ನ್ಯೂಸ್ ಕಡಬ) newskadaba.com ನವದೆಹಲಿ, ಫೆ.18. ಪ್ರಮುಖ ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದರ ದಾಖಲೆಗಳ ‘ಪರಿಶೀಲನೆ’ ಸಂದರ್ಭದಲ್ಲಿ, ಸಂಸ್ಥೆಯು ತೆರಿಗೆ ಪಾವತಿಸದಿರುವುದು ಹಾಗೂ ಬಹಿರಂಗಪಡಿಸದ ಆದಾಯ ಹೊಂದಿರುವ ಕುರಿತು ಸಾಕ್ಷ್ಯಗಳು ಲಭ್ಯವಾಗಿವೆ’ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ.

ದೆಹಲಿ ಹಾಗೂ ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಸತತ 60 ಗಂಟೆಗಳಷ್ಟು ‘ಪರಿಶೀಲನೆ’ ನಡೆಸಿದ್ದರು. ಈ ‘ಪರಿಶೀಲನೆ’ ಬಳಿಕ ಮಂಡಳಿಯು ಮೊದಲ ಅಧಿಕೃತ ಪ್ರಕಟಣೆ ಬಿಡುಗಡೆ ಮಾಡಿದೆ. ಆದರೆ, ಈ ಹೇಳಿಕೆಯಲ್ಲಿ ಬಿಬಿಸಿ ಹೆಸರನ್ನು ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ.

Also Read  ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ ➤ 24 ಗಂಟೆಗಳಲ್ಲಿ ಒಂಭತ್ತು ಮಂದಿ ಉಗ್ರರ ಹತ್ಯೆ

 

error: Content is protected !!
Scroll to Top