ರುದ್ರಾಕ್ಷಿ ಪಡೆಯಲು ನೂಕು ನುಗ್ಗಲು     ➤ ಓರ್ವ ಮಹಿಳೆ ಮತ್ತು ಕಂದಮ್ಮ ಮೃತ್ಯು…!!!

(ನ್ಯೂಸ್ ಕಡಬ)newskadaba.com ಮಧ್ಯಪ್ರದೇಶ, ಫೆ.18. ಮಧ್ಯಪ್ರದೇಶದಲ್ಲಿ ಶಿವರಾತ್ರಿ ಅಂಗವಾಗಿ ರುದ್ರಾಕ್ಷಿ ವಿತರಿಸಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾದ ಪರಿಣಾಮ ಅಸ್ವಸ್ಥಗೊಂಡು ಓರ್ವ ಮಹಿಳೆ ಹಾಗೂ ಮೂರು ವರ್ಷದ ಮಗು ಮೃತಪಟ್ಟಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಶೆಹೋರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕುಬರೇಶ್ವರ್ ಧಾಮ್ ನಲ್ಲಿ ಪಂಡಿತ್ ಪ್ರದೀಪ್ ಮಿಶ್ರಾ ರುದ್ರಾಕ್ಷಿ ವಿತರಣೆಯನ್ನು ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮಕ್ಕೆ ಎರಡು ಲಕ್ಷ ಜನರು ಆಗಮಿಸಬಹುದೆಂಬ ನಿರೀಕ್ಷೆಯಿದ್ದು ಆದರೆ ಇದನ್ನು ಮೀರಿ 10 ಲಕ್ಷಕ್ಕೂ ಅಧಿಕ ಮಂದಿ ಆಗಮಿಸಿದ್ದರು.

Also Read  ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್​ಐಆರ್

error: Content is protected !!
Scroll to Top