ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.17. ಅಸ್ವಸ್ಥ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಉಳಿದ ಇಬ್ಬರು ಆತನನ್ನು ಗೂಡ್ಸ್ ವಾಹನವೊಂದರಲ್ಲಿ ಹಾಕಿ ತಂದು ಕಸದ ರಾಶಿಗೆ ಎಸೆದ ಪ್ರಕರಣ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ. ಈತ ವಾರದ ಸಂತೆ ಹಿನ್ನೆಲೆಯಲ್ಲಿ ಕೆಮ್ಮಣ್ಣು ಮಾರುಕಟ್ಟೆಗೆ ವ್ಯಾಪಾರ ನಡೆಸಲು ಬಂದಿದ್ದ ಎನ್ನಲಾಗಿದೆ.ಆದರೆ ಅಸ್ವಸ್ಥಗೊಂಡು ಮೃತಪಟ್ಟಿದ್ದನು.ಇದನ್ನು ಕಂಡು ಇತರ ಇಬ್ಬರು ವ್ಯಾಪಾರಿಗಳು ಹನುಮಂತನ ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ಸಾಗಿಸಿಕೊಂಡು ಹೋಗಿ ಕೆಮ್ಮಣ್ಣು ಸಂತೆಮಾರುಕಟ್ಟೆ ಬಳಿಯ ರಸ್ತೆಬದಿ ಕಸದ ರಾಶಿಗೆ ಎಸೆದು ಹೋಗಿದ್ದರು. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಪೊಲೀಸರು ಇಬ್ಬರು ಕಾರ್ಮಿಕರನ್ನು ಬಂಧಿಸಿದ್ದಾರೆ.

Also Read  ಮಂಗಳೂರು: ಗೃಹರಕ್ಷಕದಳ ಕಛೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

 

 

 

error: Content is protected !!
Scroll to Top