ಮಂಗಳೂರು: ಲೈಟ್ ಕಂಬವೊಂದರ ಬುಡದಲ್ಲಿ ನವಜಾತ ಶಿಶು ಪತ್ತೆ !!

(ನ್ಯೂಸ್ ಕಡಬ)newskadaba.com ಮಂಗಳೂರು, ಫೆ.17. ಸ್ಟೇಟ್‌ಬ್ಯಾಂಕ್‌ ಸಮೀಪದ ಸರ್ವಿಸ್‌ ಬಸ್‌ ನಿಲ್ದಾಣದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಲಾಗಿದೆ ಎಂದು ಮಂಗಳೂರಿನಲ್ಲಿ ವರದಿಯಾಗಿದೆ.

ಲೈಟ್‌ ಕಂಬವೊಂದರ ಬುಡದಲ್ಲಿ ಮಗು ಇರುವುದನ್ನು ಗಮನಿಸಿದ ಚಾಲಕರು ಪೊಲೀಸರಿಗೆ ತಿಳಿಸಿದ್ದಾರೆ. ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವೆನ್ಲಾಕ್‌ನ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗದಲ್ಲಿ ಇದೀಗ ಪೊಲೀಸರು ಮಗುವನ್ನು ದಾಖಲಿಸಿದ್ದಾರೆ. ಮಗುವಿನ ಆರೋಗ್ಯದಲ್ಲಿ ಏರುಪೇರು ಇದ್ದು, ಸುಮಾರು ಒಂದು ವಾರದ ಹಿಂದೆ ಮಗು ಜನಿಸಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.

Also Read  ಜಿಲ್ಲಾ ಆರೋಗ್ಯ ವತಿಯಿಂದ, ಮೆದುಳು ಜ್ವರದ ಬಗ್ಗೆ ಮಾಹಿತಿ ಕಾರ್ಯಗಾರ

 

error: Content is protected !!
Scroll to Top