ಕುಂದಾಪುರ: ದ್ವಿಚಕ್ರ ವಾಹನಕ್ಕೆ ಢಿಕ್ಕಿಯಾಗಿ ಕಡವೆ ಮರಿ ಮೃತ್ಯು!!!                                       

(ನ್ಯೂಸ್ ಕಡಬ)newskadaba.com  ಕುಂದಾಪುರ, ಫೆ.15. ಚಲಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಡವೆ ಮರಿಯೊಂದು ಅಡ್ಡ ಬಂದ ಪರಿಣಾಮ ಕಡವೆ ಮರಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು ದ್ವಿಚಕ್ರವಾಹನ ಜಖಂಗೊಡಿದ್ದಲ್ಲದೇ ಸವಾರನಿಗೂ ಗಾಯಗಳಾದ ಘಟನೆ ಕೊಲ್ಲೂರು ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಕಮಲಶಿಲೆ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರೊಬ್ಬರು ಚಿತ್ತೂರು ಕಡೆಯಿಂದ ಕೊಲ್ಲೂರು ಕಡೆಗೆ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದರು. ಬೆಳಗ್ಗಿನ ಸಂದರ್ಭ ಹಾರ್ಮಣ್ಣು ಎಂಬಲ್ಲಿರುವ ಪೆಟ್ರೋಲ್ ಬಂಕ್ ಸಮೀಪ ಬರುತ್ತಿದ್ದಂತೆ ಕಡವೆಮರಿಯೊಂದು ವೇಗವಾಹಿ ರಸ್ತೆಗೆ ಹಾರಿದ ಪರಿಣಾಮ ಸ್ಕೂಟರ್ ಮುಂಭಾಗಕ್ಕೆ ಡಿಕ್ಕಿಹೊಡೆದಿದೆ.

Also Read  ಪುರುಷರಕಟ್ಟೆ: ರಿಕ್ಷಾ ಚಾಲಕ ಪ್ರವೀಣ್‌ ಶೈಣೈ ನೇಣಿಗೆ ಶರಣು

 

error: Content is protected !!
Scroll to Top