ಅಪಘಾತದಲ್ಲಿ ಯುವತಿ ಮೃತ್ಯು; ಪ್ರಕರಣಕ್ಕೆ ತಿರುವು !!!

(ನ್ಯೂಸ್ ಕಡಬ)newskadaba.com  ಕಾಪು, ಫೆ.15. ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಮೂಡಬೆಟ್ಟು ಕಂಬಳಕಟ್ಟ ಬಳಿ ಸೋಮವಾರ ರಾತ್ರಿ ಯುವತಿ ಸಾವಿಗೆ ಕಾರಣವಾಗಿದ್ದ ಅಪಘಾತ ಪ್ರಕರಣಕ್ಕೆ ತಿರುವು ದೊರಕಿದ್ದು, ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್‌ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಸ್ಕೂಟಿ ಸವಾರ ಕಾಪು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳೂರು ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜಿನ ಲ್ಯಾಬ್‌ ಟೆಕ್ನಾಲಜಿಸ್ಟ್‌ ಆಗಿದ್ದ ಮಂಗಳೂರು ಜೆಪ್ಪು ಪಟ್ಲ ನಿವಾಸಿ ರೋಶನಿ ಡಿ’ಸೋಜಾ (26) ಅವರು ನಿಶ್ಚಿತಾರ್ಥವಾಗಿದ್ದ ಜಾಯಲ್‌ ಡಿ’ಕೋಸ್ತಾ ಅವರೊಂದಿಗೆ ಕಲ್ಮಾಡಿ ಚರ್ಚ್‌ಗೆ ಭೇಟಿ ನೀಡಿ ಸ್ಕೂಟಿಯಲ್ಲಿ ಉಡುಪಿಯಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದಾಗ ಈ ಅಪಘಾತ ಸಂಭವಿಸಿತ್ತು.

Also Read  ನಾವೂರು: ಅಂಗಡಿ ಮಾಲಕರಿಗೆ ಹಲ್ಲೆ ➤ ರೂ 1.50 ಲಕ್ಷ ನಗದು ದೋಚಿ ಪರಾರಿ

error: Content is protected !!
Scroll to Top