ಭೀಕರ ರಸ್ತೆ ಅಪಘಾತ ➤‌ ಮೂವರು ಮೃತ್ಯು

(ನ್ಯೂಸ್ ಕಡಬ) newskadaba.com ಗದದ, ಫೆ.13.  ಗದಗ ಜಿಲ್ಲೆ ಬೆಟಗೇರಿ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ಭೀಕರ ರಸ್ತೆ ಅಪಘಾತಕ್ಕೆ ಮೂವರು ಮೃತಪಟ್ಟಿದ್ದಾರೆ. ಆಟೋ ಹಾಗೂ  ಟೆಂಪೋ ನಡುವೆ ಡಿಕ್ಕಿ ಸಂಭವಿಸಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದ್ದ ಮದುವೆ ಮುಗಿಸಿ ಬೆಟಗೇರಿ ಕಡೆ ಬರುತ್ತಿದ್ದ ಮಿನಿ ಬಸ್, ನರೇಗಲ್ ಕಡೆ ಹೊರಟಿದ್ದ ಎಲ್​​ಪಿಜಿ ಆಟೋ ನಡುವೆ ಅಪಘಾತ ನಡೆದಿದೆ.

ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ ಹಾಗೂ ಪ್ರದೀಪ್, ಮಂಜುನಾಥ್ ನಗರದ ನಿವಾಸಿ ನಿಖಿಲ್ ಮೃತರು. ಆಟೋ ಸಂಪೂರ್ಣ ನಜ್ಜು ಗುಜ್ಜಾಗಿದ್ದು, ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಬೆಟಗೇರಿ ಟ್ರಾಫಿಕ್​​​​​​ ಠಾಣೆಯಲ್ಲಿ  ಪ್ರಕರಣ  ದಾಖಲಾಗಿದೆ.

Also Read  ಮೆಕ್ಸಿಕೋ ಭಾರೀ ಭೂಕಂಪ ► ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆ

 

error: Content is protected !!
Scroll to Top