ಪಾಕ್ ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಜಾಧವ್ ಭೇಟಿಯಾದ ಕುಟುಂಬ ► ತಾಯಿ, ಪತ್ನಿಯಿಂದ ಸುಮಾರು 45 ನಿಮಿಷಗಳ ಕಾಲ ಮಾತುಕತೆ

(ನ್ಯೂಸ್ ಕಡಬ) newskadaba.com ಹೊಸದಿಲ್ಲಿ, ಡಿ.25. ಬೇಹುಗಾರಿಕೆಯ ಆರೋಪದಲ್ಲಿ ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರು ಸೋಮವಾರ ಇಸ್ಲಾಮಾಬಾದ್‌ನ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ತನ್ನ ತಾಯಿ ಅವಂತಿ ಜಾಧವ್ ಮತ್ತು ಪತ್ನಿ ಚೇತಂಕುಲ ಜಾಧವ್ ಅವರನ್ನು ಭೇಟಿಯಾಗಿ ಸುಮಾರು 45 ನಿಮಿಷಗಳ ಕಾಲ ಮಾತುಕತೆ ನಡೆಸಿದರು.

ಭೇಟಿಯ ಸಂದರ್ಭ ಅವರ ನಡುವೆ ಗಾಜಿನ ತೆರೆಯಿದ್ದು, ಮಾತನಾಡಲು ಇಂಟರ್‌ಕಾಮ್ ಸೌಲಭ್ಯವನ್ನು ಒದಗಿಸಲಾಗಿತ್ತು. ಐವರು ಅಧಿಕಾರಿಗಳು ಉಪಸ್ಥಿತರಿದ್ದು ದೈಹಿಕ ಸಂಪರ್ಕಕ್ಕೆ ಅವಕಾಶವಿರಲಿಲ್ಲ. ಸೋಮವಾರ ಜಾಧವ್ ಕುಟುಂಬದ ಜೊತೆಗೆ ಭಾರತೀಯ ಉಪ ರಾಯಭಾರಿಗಳಿದ್ದರು. ದುಬೈ ಮೂಲಕ ಅಪರಾಹ್ನ ಇಸ್ಲಾಮಾಬಾದ್ ತಲುಪಿದ್ದ ಜಾಧವ್‌ರ ತಾಯಿ ಮತ್ತು ಪತ್ನಿಯನ್ನು ಭೇಟಿಗಾಗಿ ಕರೆದೊಯ್ಯುತ್ತಿದ್ದಾಗ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಡೆಯಲಾಗಿತ್ತು. ಭದ್ರತೆಯ ದೃಷ್ಟಿಯಿಂದ ಎತ್ತರದ ಛಾವಣಿಗಳ ಮೇಲೆ ಪಾಕಿಸ್ತಾನಿ ರೇಂಜರ್‌ಗಳು, ಭಯೋತ್ಪಾದನಾ ನಿಗ್ರಹ ದಳಗಳು ಮತ್ತು ಶಾರ್ಪ್ ಶೂಟರ್‌ಗಳನ್ನು ನಿಯೋಜಿಸಲಾಗಿತ್ತು.

Also Read  ವಿವಾಹದಲ್ಲಿ ಅಡಚಣೆ ಸಮಸ್ಯೆಗೆ ಹೀಗೆ ಮಾಡಿ ಬೇಗ ಮದುವೆ ಭಾಗ್ಯ ಬಯಸುವವರು ಈ ರೀತಿ ಮಾಡಿದರೆ ಸಾಕು

ಭಾರತದ ಮೇಲ್ಮನವಿಯ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ನ್ಯಾಯಾಲಯವು ಈ ವರ್ಷದ ಮೇ ತಿಂಗಳಿನಲ್ಲಿ ಅವರ ಮರಣ ದಂಡನೆ ಜಾರಿಗೆ ತಡೆಯಾಜ್ಞೆ ನೀಡಿದೆ. ಇನ್ನು ಕೆಲವೇ ವಾರಗಳಲ್ಲಿ ಜಾಧವ್‌ರ ಮರಣ ದಂಡನೆಯ ವಿರುದ್ಧ ಭಾರತದ ಮೇಲ್ಮನವಿಯ ವಿಚಾರಣೆಯನ್ನು ನಡೆಸಲಿದೆ.

error: Content is protected !!
Scroll to Top