ಸ್ಕಿಟ್‌ನಲ್ಲಿ ಡಾ.ಬಿ.ಆರ್  ಅಂಬೇಡ್ಕರ್​, ದಲಿತರಿಗೆ ಅವಮಾನ ➤ವಿವಿ ಪ್ರಿನ್ಸಿಪಾಲ್​​ ಸೇರಿದಂತೆ 6 ಜನರ ವಿರುದ್ಧ FIR​

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.12. ನಗರದ ಪ್ರತಿಷ್ಠಿತ ಜೈನ್ ವಿಶ್ವವಿದ್ಯಾನಿಲಯದ ಕಾರ್ಯಕ್ರಮದ ನಾಟಕವೊಂದರಲ್ಲಿ ಅಂಬೇಡ್ಕರ್​ ಹಾಗೂ ದಲಿತರಿಗೆ ಅವಮಾನ ಮಾಡಿದ ವಿಚಾರವಾಗಿ ಪ್ರಿನ್ಸಿಪಾಲ್​​ ಸೇರಿದಂತೆ 6 ಮಂದಿಯ ವಿರುದ್ಧ ನಗರದ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಬೆಂಗಳೂರು ದಕ್ಷಿಣ ವಿಭಾಗದ ಸಮಾಜ ಕಲ್ಯಾಣಾಧಿಕಾರಿ ದೂರು ಹಿನ್ನೆಲೆ FIR ದಾಖಲಿಸಲಾಗಿದೆ. ಕಾರ್ಯಕ್ರಮದ ಸ್ಕಿಟ್‌ನಲ್ಲಿ ಅಂಬೇಡ್ಕರ್​ ಅವರನ್ನು ಬೀಯರ್ ಅಂಬೇಡ್ಕರ್ ಎಂದು ಅವಹೇಳನ ಮಾಡಲಾಗಿತ್ತು. ಈ ಸ್ಕಿಟ್‌ನಲ್ಲಿ ದಲಿತ ಸಮುದಾಯವನ್ನೂ ಅವಮಾನಿಸಲಾಗಿತ್ತು. ಈ ಸಂಭಂದವಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ವಿವಿ ಪ್ರಾಂಶುಪಾಲರು, ಡೀನ್, ಕಾರ್ಯಕ್ರಮ ಆಯೋಜಕರು, ವಿದ್ಯಾರ್ಥಿಗಳು, ಸ್ಕಿಟ್​ ಬರಹಗಾರರ ವಿರುದ್ಧ FIR ದಾಖಲಾಗಿದೆ.

Also Read  ?ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹೋಟೆಲ್ ಸಿಬ್ಬಂದಿಯೋರ್ವರ ಮೃತದೇಹ ಪತ್ತೆ

error: Content is protected !!
Scroll to Top