ಬೆಂಕಿ ಅವಘಡ: ನಾರಿನ ಘಟಕ ಸಂಪೂರ್ಣ ನಾಶ‌…

(ನ್ಯೂಸ್ ಕಡಬ) newskadaba.com ತುಮಕೂರು, ಫೆ.10. ಜಿಲ್ಲೆಯ ತುರುವೇಕೆರೆ ತಾಲೂಕಿನ ಬಿಗನೇನಹಳ್ಳಿ ಹೊರವಲಯದಲ್ಲಿ ಬೆಂಕಿ ಅವಘಡ ಸಂಭವಿಸಿ ನಾರಿನ ಘಟಕ ಸಂಪೂರ್ಣ ಭಸ್ಮವಾಗಿದೆ.

ಹಳ್ಳದಹೊಸಹಳ್ಳಿ ಗ್ರಾಮದ ನಿವಾಸಿ ಬಸವರಾಜುರಿಗೆ ಸೇರಿದ ನಾರಿನ ಘಟಕವಾಗಿದೆ. ಘಟಕದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕ್ಷಣ ಮಾತ್ರದಲ್ಲಿ ಇಡೀ ಘಟಕ ಸಂಪೂರ್ಣ ಸುಟ್ಟು ನಾಶವಾಗಿದೆ. ಬೆಂಕಿ ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಸುಟ್ಟುಹೋಗಿವೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯಚರಣೆ ನಡೆದಿದೆ. ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read   ಆಕಸ್ಮಿಕವಾಗಿ ನೀರಿಗೆ ಬಿದ್ದು ಬಾಲಕಿ ಮೃತ್ಯು ➤ಪರಿಹಾರದ ಹಣಕ್ಕಾಗಿ 'ಹೆತ್ತ' ಹಾಗೂ 'ದತ್ತು' ಪೋಷಕರ ನಡುವೆ ಪೈಪೋಟಿ!

 

error: Content is protected !!
Scroll to Top