(ನ್ಯೂಸ್ ಕಡಬ) newskadaba.com. ಬೆಂಗಳೂರು, ಫೆ.9. ಕಳೆದ 10-15 ದಿನಗಳಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಗರಿಷ್ಠ ಪ್ರಮಾಣದ ಕೋವಿಡ್ ಲಸಿಕೆಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಜನವರಿ 29ರೊಳಗೆ 4.3 ಲಕ್ಷ ಡೋಸ್ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ರಾಜ್ಯ ಸರ್ಕಾರ ಬಳಸಬೇಕಾಗಿತ್ತು, ಈ ಪೈಕಿ 1.1 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆಗಳು ಜನವರಿ 31 ರೊಳಗೆ ಮತ್ತು 3.2 ಲಕ್ಷ ಡೋಸ್ ಕೋವಿಶೀಲ್ಡ್ ಲಸಿಕೆಗಳು ಫೆಬ್ರವರಿ 9 ರೊಳಗೆ ಬಳಸಬೇಕಿತ್ತು. ಈ ಲಸಿಕೆಗಳನ್ನು ಜನವರಿ 31ರೊಳಗೆ ಬಳಕೆ ಮಾಡಲಾಗಿದ್ದು, ಈ ಲಸಿಕೆಗಳು ವ್ಯರ್ಥವಾಗದಂತೆ ಬಳಕೆ ಮಾಡಿಕೊಂಡಿದ್ದೇವೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಸಿಕಾ ಅಭಿಯಾನದ ಉಪ ನಿರ್ದೇಶಕಿ ಡಾ.ರಜಿನಿ ಹೇಳಿದ್ದಾರೆ.