ಟ್ರ್ಯಾಕ್ಟರ್​ನಿಂದ ಬಿದ್ದು ಯೋಧ ಮೃತ್ಯು

(ನ್ಯೂಸ್ ಕಡಬ)newskadaba.com ಧಾರವಾಡ,ಫೆ.09.  ರಜೆಯ ನಿಮಿತ ತಮ್ಮ ಊರಿಗೆ ಬಂದಿದ್ದ ಸೈನಿಕ ಟ್ರ್ಯಾಕ್ಟರ್ ಮೇಲಿಂದ ಬಿದ್ದು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ನಲ್ಲಿ ನಡೆದಿದೆ. ನಾಗಪ್ಪ ಉದ್ಮೀಶಿ (27) ಮೃತ ಸೈನಿಕ. ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದವರು ಎಂದು ಗುರುತಿಸಲಾಗಿದೆ.

ಗ್ರಾಮಸ್ಥರೊಂದಿಗೆ ಗರಗ ಮಡಿವಾಳೇಶ್ವರ ಜಾತ್ರೆ ಬಂದಿದ್ದು, ಬಳಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸ್​ ಮರಳುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ದುರ್ಘಟನೆ ನಡೆದಿದೆ. ಗರಗ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ ಎಂದು ತಿಳಿದಿದ್ದೆ.

Also Read  ನವೆಂಬರ್ 27ರವರೆಗೆ ಕರ್ನಾಟಕದ 25ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

 

 

error: Content is protected !!
Scroll to Top