ಪತ್ನಿಯ ಶವವನ್ನು ಹೆಗಲಮೇಲೆ ಹೊತ್ತು ಕಿಲೋಮೀಟರ್​ಗಟ್ಟಲೆ ನಡೆದ ವ್ಯಕ್ತಿ  

(ನ್ಯೂಸ್ ಕಡಬ)newskadaba.com ಆಂಧ್ರಪ್ರದೇಶ, ಫೆ.09.  ಪತ್ನಿಯ ಮೃತದೇಹವನ್ನು ಹೊತ್ತು ವ್ಯಕ್ತಿಯೊಬ್ಬ ಕಿಲೋಮೀಟರ್​ಗಟ್ಟಲೆ ನಡೆದಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ಆಂಧ್ರಪ್ರದೇಶದ ಆಸ್ಪತ್ರೆಯಿಂದ ಹಿಂದಿರುಗುವಾಗ ಆಟೋದಲ್ಲಿ ಪತ್ನಿ ಮೃತಪಟ್ಟಿದ್ದು, ಬಳಿಕ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ ಎಂದು ವರದಿಯಾಗಿದೆ.

ಪೊಲೀಸರು ಗಮನಿಸಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಸಂಗಿವಲಸದಲ್ಲಿರುವ ತನ್ನ ಅಸ್ವಸ್ಥ ಪತ್ನಿಯನ್ನು ಪಾಂಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಅಲ್ಲಿನ ವೈದ್ಯರು ತಿಳಿಸಿದ್ದು, ಸುಮಾರು 100 ಕಿ.ಮೀ ದೂರದಲ್ಲಿರುವ  ಮನೆಗೆಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ. ಪಾಂಗಿ ಅವರು ತಮ್ಮ ಹಳ್ಳಿಗೆ ಮರಳಲು ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು, ಆದರೆ ಪತ್ನಿ ಅವರು ವಿಜಯನಗರದ ಬಳಿ ಮಧ್ಯದಲ್ಲಿ ನಿಧನರಾದರು. ನಂತರ ಆಟೋ ಚಾಲಕ ಪ್ರಯಾಣ ಮುಂದುವರಿಸಲು ನಿರಾಕರಿಸಿ ಚೆಲ್ಲೂರು ರಿಂಗ್ ರೋಡ್​ನಲ್ಲಿ ಅವರನ್ನು ಇಳಿಸಿದ್ದಾನೆ. ಬೇರೆ ದಾರಿ ಕಾಣದೆ ಪಾಂಗಿ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿಲೋಮೀಟರ್ ದೂರದಲ್ಲಿದ್ದ ಮನೆಯ ಕಡೆಗೆ ನಡೆದಿದ್ದಾರೆ.

Also Read  ಪ್ರವಾಸಿ ಬಸ್‌ನಲ್ಲಿ ಕಾಣಿಸಿಕೊಂಡ ಬೆಂಕಿ ➤ ತಪ್ಪಿದ ಭಾರಿ ಅನಾಹುತ

 

error: Content is protected !!
Scroll to Top