ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಬಲಿ!

(ನ್ಯೂಸ್ ಕಡಬ)newskadaba.com ದಾವಣಗೆರೆ, ಫೆ.08.   ಅಪರಿಚಿತ ವಾಹನಕ್ಕೆ ಸಿಲುಕಿ ಚಿರತೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಆನಗೋಡು ಬಳಿ‌ ನಡೆದಿದೆ. ಚಿರತೆಯೊಂದು ರಸ್ತೆ ದಾಟುವಾಗ ಈ ಅವಘಡ‌ ನಡೆದಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಪರಿಚಿತ ವಾಹನವೊಂದು ಚಿರತೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದೆ. ವಾಹನ ಡಿಕ್ಕಿಯಾದ ರಭಸಕ್ಕೆ ಚಿರತೆ  ತಲೆ ದೇಹದ ಭಾಗಕ್ಕೆ ತೀವ್ರ  ಗಾಯಗಳಾಗಿವೆ.

ಆನಗೋಡು ಸುತ್ತಮುತ್ತ ಚಿರತೆ ಓಡಾಡುತ್ತಿದ್ದ ಬಗ್ಗೆ ಗ್ರಾಮಸ್ಥರು ಭಯಭೀತರಾಗಿದ್ದರು. ಈ ಬಗ್ಗೆ ಅರಣ್ಯ ಅಧಿಕಾರಿಗಳ ಗಮನಕ್ಕೂ ತಂದಿದ್ದರು. ಇದೀಗ ಅಪರಿಚಿತ ವಾಹನ ಡಿಕ್ಕಿಯಾಗಿ ಚಿರತೆ ಸಾವನ್ನಪ್ಪಿದೆ. ಇದರಿಂದ ಈ ಭಾಗದಲ್ಲಿ ಚಿರತೆ ಚಲನವಲನ ಬಗ್ಗೆ ಸ್ಪಷ್ಟತೆ ಸಿಕ್ಕಿದೆ.  ರಸ್ತೆಯಲ್ಲಿ ಅಮೂಲ್ಯ ವನ್ಯಮೃಗ ಸಾವನ್ನಪ್ಪಿರುವುದು ಆತಂಕ ತಂದಿದ್ದು ಇನ್ನು ಮುಂದೆ ಅಪಘಾತದಲ್ಲಿ  ಚಿರತೆ ಸೇರಿದಂತೆ ವನ್ಯ ಮೃಗಗಳ ಸಾವನ್ನಪ್ಪದಂತೆ ಅರಣ್ಯ ಇಲಾಖೆ ಕ್ರಮ‌ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Also Read  ಹಬ್ಬದ ಸಂಭ್ರಮ ಹೆಚ್ಚಿಸಿದ ಚಿನ್ನದ ದರ: ಬೆಲೆಯಲ್ಲಿ ಕುಸಿತ

 

 

 

error: Content is protected !!
Scroll to Top