ಚಿರತೆ ಮರಿಗಳನ್ನು ಮನೆಗೆ ತಂದು ಸಾಕಿದ ಮಕ್ಕಳು ➤ ಮರಿಗಳನ್ನು ನೋಡಲು ಮುಗಿಬಿದ್ದ ಗ್ರಾಮಸ್ಥರು

(ನ್ಯೂಸ್ ಕಡಬ)newskadaba.com ಮಂಡ್ಯ, ಫೆ.08. ಜಿಲ್ಲೆಯ ಮದ್ದೂರು ತಾಲೂಕಿನ ಕೂಳಗೆರೆ ಗ್ರಾಮವೊಂದರಲ್ಲಿ ಜಮೀನಿನಲ್ಲಿ ಸಿಕ್ಕ 2 ಚಿರತೆ ಮರಿಗಳನ್ನು  ಮಕ್ಕಳು ಮನೆಗೆ ತೆಗೆದುಕೊಂಡು ಹೋಗಿ ಸಾಕುತ್ತಿರುವಂತಹ ಘಟನೆ ನಡೆದಿದೆ. ಕೀರ್ತಿಕುಮಾರ್​ ಎನ್ನುವವರ ಜಮೀನಿನಲ್ಲಿ 8 ಚಿರತೆ ಮರಿಗಳು ಪತ್ತೆಯಾಗಿವೆ. ತಾಯಿ ಚಿರತೆ ಬೇಟೆಗೆ ಹೋದಾಗ ಮರಿಗಳು ಏಕಾಂಗಿಯಾಗಿ ಜಮೀನಿನಲ್ಲಿ ತಿರುಗುತ್ತಿದ್ದವು.

ಆಗ ಅದರಲ್ಲಿ ಎರಡು ಚಿರತೆ ಮರಿಗಳನ್ನು ಮಕ್ಕಳು ಮನೆಗೆ ತೆಗೆದುಕೊಂಡು ಬಂದು ಕೋಳಿ ಗೂಡಿನಲ್ಲಿ 2 ಚಿರತೆ ಮರಿಗಳನ್ನು ಕೂಡಿ ಹಾಕಿದ ಮಕ್ಕಳು ಪೋಷಿಸಿದ್ದಾರೆ. ಚಿರತೆ ಮರಿಗಳನ್ನು ನೋಡಲು ಕೂಳಗೆರೆ ಗ್ರಾಮಸ್ಥರು ಮುಗಿಬಿದ್ದಿದ್ದಾರೆ. ಸದ್ಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿ ತಂಡ ಚಿರತೆ ಮರಿಗಳನ್ನ ರಕ್ಷಿಸಿದ ಅರಣ್ಯಾಧಿಕಾರಿಗಳು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ.

Also Read  ಪುತ್ತೂರು: ಸ್ಕೂಟರ್ ಹಾಗೂ ಕಾರು ನಡುವೆ ಢಿಕ್ಕಿ ➤ ಸ್ಕೂಟರ್ ಸವಾರ ಗಂಭೀರ

 

 

error: Content is protected !!
Scroll to Top