ಶ್ರದ್ಧಾ ದೇಹದ ಮೂಳೆಗಳನ್ನು ಮಿಕ್ಸರ್ನಲ್ಲಿ ಪುಡಿ ಮಾಡಿದ್ದ ಅಫ್ತಾಬ್! ➤ ಚಾರ್ಜ್ ಶೀಟ್ ನಲ್ಲಿ ಬಹಿರಂಗ

(ನ್ಯೂಸ್ ಕಡಬ)newskadaba.com ಹೊಸದಿಲ್ಲಿ, ಫೆ.08. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಶ್ರದ್ಧಾ ವಾಕರ್ ಭೀಕರ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 6,600 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಿದ್ದಾರೆ.  ಶ್ರದ್ಧಾ ಡಿಎನ್‌ಎ ವರದಿಗಳ ಹೊರತಾಗಿಯೂ ತನಿಖೆಯ ಸಂದರ್ಭದಲ್ಲಿ ಸಂಗ್ರಹಿಸಲಾದ ವಿಧಿವಿಜ್ಞಾನ ಸಾಕ್ಷ್ಯಗಳ ಪಟ್ಟಿಯನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದ್ದು, ಆರೋಪಿಯು ತನ್ನ ಶ್ರದ್ಧಾಳ ಮೃತದೇಹವನ್ನು ಹೇಗೆ ವಿಲೇವಾರಿ ಮಾಡಿದ ಎಂಬ ವಿವರಗಳನ್ನು ದಾಖಲಿಸಲಾಗಿದೆ.

ದೆಹಲಿ ಪೊಲೀಸರು ಸಲ್ಲಿಸಿರುವ 6,636 ಪುಟಗಳ ಚಾರ್ಜ್‌ಶೀಟ್ ಪ್ರಕಾರ, ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ಮೃತ ಶ್ರದ್ಧಾಳ ತಲೆ ಮತ್ತು ಮುಂಡವನ್ನು ಬ್ಲೋ ಟಾರ್ಚ್ ಬಳಸಿ ಸುಟ್ಟು ವಿರೂಪಗೊಳಿಸಿದ್ದು ಮಾತ್ರವಲ್ಲದೇ, ಮಾರ್ಬಲ್ ಗ್ರೈಂಡರ್ ಬಳಸಿ ಆಕೆಯ ದೇಹದ ಮೂಳೆಗಳನ್ನು ಪುಡಿಪುಡಿ ಮಾಡಿದ್ದಾನೆ ಎಂಬ ಆಘಾತಕಾರಿ ವಿಷಯಗಳನ್ನು ದಾಖಲಿಸಲಾಗಿದೆ.

Also Read  ಕೆಲಸ ಕಳೆದುಕೊಂಡು ತರಕಾರಿ ಮಾರುತ್ತಿದ್ದ ಟೆಕ್ಕಿಗೆ ಆಸರೆಯಾದ ಸೋನು ಸೂದ್..!

 

 

error: Content is protected !!
Scroll to Top