(ನ್ಯೂಸ್ ಕಡಬ) newskadaba.com ಚಿಕ್ಕಬಳ್ಳಾಪುರ, ಫೆ.8. ಸವೇಶ್ವರ ಜ್ಯೂಯೆಲ್ಸ್ ಪೆಟ್ರೋಲ್ ಬಂಕ್ ನ ಪೆಟ್ರೋಲ್ ಬಂಕ್ ಯಂತ್ರೋಪಕರಣಗಳನ್ನು ತಪಾಸಣೆ ಮಾಡಿ ಪ್ರಮಾಣ ಪತ್ರ ನೀಡಲು ಚಿಕ್ಕಬಳ್ಳಾಪುರ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರಾದ ಎಸ್. ಮಾಲಾ ಕಿರಣ್ 8 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಚಿಕ್ಕಬಳ್ಳಾಪುರ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಎಸ್. ಮಾಲಾ ಕಿರಣ್ ರನ್ನು ರೆಡ್ ಹ್ಯಾಂಡಾಗಿ ಟ್ರಾಪ್ ಮಾಡಿ ಬಂಧಿಸಿದ್ರು.
ಚಿಕ್ಕಬಳ್ಳಾಪುರದ ಬಸವೇಶ್ವರ ಜ್ಯೂಯೆಲ್ಸ್ ಪೆಟ್ರೋಲ್ ಬಂಕ್ ನ ಮಾಲಿಕರಾದ ಭಾಸ್ಕರ್ ರವರ ಮಗ ಜಯಸೂರ್ಯ ರಿಂದ ಲಂಚ ಸ್ವೀಕರಿಸುತ್ತಿದ್ದ ಎಸ್. ಮಾಲಾ ಕಿರಣ್ ರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದ್ರು. ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು 14 ದಿನಗಳ ಕಾಲ ಎಸ್. ಮಾಲಾ ಕಿರಣ್ ರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.