ಜುವೆಲ್ಯರಿ ಸಿಬ್ಬಂದಿ ಹತ್ಯೆ ಪ್ರಕರಣ ➤ ಆರೋಪಿಗಾಗಿ 7 ತಂಡಗಳಿಂದ ಶೋಧ

(ನ್ಯೂಸ್ ಕಡಬ) newskadaba.com ಮಂಗಳೂರು ,ಫೆ.8.  ಹಂಪನಕಟ್ಟೆಯಲ್ಲಿರುವ ಜುವೆಲ್ಯರಿ ಅಂಗಡಿಯೊಂದರ ಸಿಬ್ಬಂದಿ ರಾಘವೇಂದ್ರ ಆಚಾರ್ಯ (55) ಅವರನ್ನು  ಕೆಲ ದಿನಗಳ ಹಿಂದೆ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿದ ಆರೋಪಿಯ ಪತ್ತೆಗೆ 7 ಪೊಲೀಸ್‌ ತಂಡಗಳನ್ನು ರಚಿಸಲಾಗಿದೆ.

ಕೊಲೆ ಮಾಡಿರುವ ಆರೋಪಿಯ ಚಹರೆ ಸಿಸಿ ಕೆಮರಾದಲ್ಲಿ ದಾಖಲಾಗಿದ್ದರೂ ಆತ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗಿದ್ದು, ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ಇನ್ನು ಆರೋಪಿಯು ಜುವೆಲ್ಯರಿಯಿಂದ ಹೊರಗೆ ಬಂದ ಬಳಿಕ ಎರಡೆರಡು ರಿಕ್ಷಾಗಳಲ್ಲಿ ಹೋಗುವ ಮೂಲಕ ತನಿಖೆಯ ಹಾದಿ ತಪ್ಪಿಸಲು ಯತ್ನಿಸಿದ್ದಾನೆ ಎನ್ನಲಾಗಿದೆ.

Also Read  ಉಡುಪಿ :ಅಂಗಡಿಯ ಮುಂಭಾಗವೇ ಆತ್ಮಹತ್ಯೆಗೆ ಶರಣಾದ ಯುವಕ

ಆತ ಮೊದಲು ಹಂಪನಕಟ್ಟೆಯಿಂದ ವಲೆ ನ್ಸಿಯಾದವರೆಗೆ ಒಂದು ರಿಕ್ಷಾದಲ್ಲಿ ಸಾಗಿ, ಆ ಬಳಿಕ ಅಲ್ಲಿ ಇಳಿಯುತ್ತಾನೆ. ಮತ್ತೂಂದು ರಿಕ್ಷಾವನ್ನೇರಿ ಜೆಪ್ಪು ವರೆಗೂ ಹೋಗಿದ್ದಾನೆ. ಅಲ್ಲಿ ರಿಕ್ಷಾದಿಂದ ಇಳಿದು ರೈಲ್ವೇ ಹಳಿಯತ್ತ ತೆರಳಿದ್ದು, ಬಳಿಕ ಎಲ್ಲಿಗೆ ತೆರಲಿದ್ದಾನೆ ಎಂಬುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.

 

error: Content is protected !!
Scroll to Top