ಟರ್ಕಿ ಹಾಗೂ ಸಿರಿಯಾದಲ್ಲಿ ನಡೆದ ಭೂಕಂಪನ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿದ ಮಹಿಳೆ ➤ತಾಯಿ ಮೃತಪಟ್ಟರೂ ಹೊಕ್ಕುಳ ಬಳ್ಳಿ ಸಮೇತ ಬದುಕಿ ಬಂದ ಕೂಸು

(ನ್ಯೂಸ್ ಕಡಬ) newskadaba.com. ಟರ್ಕಿ, ಫೆ.8.  ಟರ್ಕಿ ಹಾಗೂ ಸಿರಿಯಾದಲ್ಲಿ ಸಂಭವಿಸಿದ ಭೂಕಂಪದಲ್ಲಿ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದಾರೆ, ಇನ್ನೂ ಸಾವಿರಾರು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ಆದರೆ ಅದೇ ಅವಶೇಷಗಳಡಿ ಮಗುವೊಂದು ಜನಿಸಿದ್ದು, ಹೊಕ್ಕುಳ ಬಳ್ಳಿ ಕತ್ತರಿಸುವ ಮುನ್ನವೇ ತಾಯಿ ಮೃತಪಟ್ಟಿದ್ದು, ಮಗುವನ್ನು ಜೀವಂತವಾಗಿ ಹೊರತೆಗೆಯಲಾಗಿದೆ.

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಭಾರತದಿಂದ ಪರಿಹಾರ ಮತ್ತು ರಕ್ಷಣಾ ತಂಡಗಳು ಟರ್ಕಿ ತಲುಪಿವೆ. ಅವಶೇಷಗಳಡಿ ಇನ್ನೂ ಸಾವಿರಾರು ಜನರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅವರ ರಕ್ಷಣಾ ಕಾರ್ಯ ವೇಗವಾಗಿ ನಡೆಯುತ್ತಿದೆ. ಅವಶೇಷಗಳ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜೀವಂತವಾಗಿರಬಹುದು, ಅದಕ್ಕಾಗಿಯೇ ರಕ್ಷಣಾ ತಂಡವು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕಾಗುತ್ತದೆ..

Also Read  ಅಕ್ಷತಾ ಪಾಂಡವಪುರಗೆ "ನ್ಯೂಯಾರ್ಕ್ ಇಂಡಿಯನ್ ಫಿಲ್ಮ್" ಪ್ರಶಸ್ತಿ

ಅವಶೇಷಗಳಡಿ ಸಿಲುಕಿದ್ದ ಗರ್ಭಿಣಿ ಹೆಣ್ಣುಮಗುವಿಗೆ ಜನ್ಮ ನೀಡಿ ಪ್ರಾಣಬಿಟ್ಟಿದ್ದಾರೆ. 34 ವರ್ಷದ ಖಲೀಲ್ ಅಲ್ ಶಮಿ, ಸೋಮವಾರ ಸಿರಿಯಾದ ಜಿಂಡರೆಸ್ ನಗರದಲ್ಲಿ ಸಂಭವಿಸಿದ ಭೂಕಂಪದಿಂದ ತನ್ನ ಸಹೋದರನ ಮನೆಯೂ ನಾಶವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾ, ಕುಟುಂಬದ ಸದಸ್ಯರನ್ನು ಹುಡುಕಲು ಅವಶೇಷಗಳನ್ನು ಒಂದೊಂದಾಗಿಯೇ ಬದಿಗೆ ಸರಿಸುತ್ತಾ ಹೋಗುತ್ತಿದ್ದರು.

ಆ ಸಂದರ್ಭದಲ್ಲಿ ತನ್ನ ಅತ್ತಿಗೆಯ ಹೊಕ್ಕುಳ ಬಳ್ಳಿಗೆ ಜೋಡಿಸಲಾದ ಸುಂದರವಾದ ಹೆಣ್ಣುಮಗುವನ್ನು ಕಂಡು ಮನಸ್ಸು ತುಂಬಿ ಬಂದಿತ್ತು, ಆದರೆ ಮಗುವು ಜೀವಂತವಾಗಿರುವುದು ಕಂಡುಬಂದಿತ್ತು, ಆಗ ತಕ್ಷಣವೇ ಹೊಕ್ಕುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ಹೊರತೆಗೆಯಲಾಯಿತು. ಆದರೆ ತಾಯಿ ಮೃತಪಟ್ಟಿದ್ದಾರೆ. ಅತ್ತಿಗೆ ತುಂಬು ಗರ್ಭಿಣಿಯಾಗಿದ್ದರು, ಒಂದು ಅಥವಾ ಎರಡು ದಿನಗಳಲ್ಲಿ ಹೆರಿಗೆಯಾಗುತ್ತಿತ್ತು ಎಂದು ಖಲೀಲ್ ತಿಳಿಸಿದ್ದಾರೆ.

error: Content is protected !!
Scroll to Top