ಖ್ಯಾತ ಸಿನಿಮಾ ಪತ್ರಕರ್ತ ಮಂಗಳೂರು ಮೂಲದ ರೌಫ್ ಅಹ್ಮದ್ ನಿಧನ

(ನ್ಯೂಸ್ ಕಡಬ) newskadaba.com ಮುಂಬೈ, ಫೆ. 07. ಚಲನಚಿತ್ರ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ ಆ ಕ್ಷೇತ್ರದಲ್ಲಿ ಹಲವು ಹೊಸ ಪ್ರಯೋಗಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಮಂಗಳೂರು ಮೂಲದ ಖ್ಯಾತ ಪತ್ರಕರ್ತ, ಲೇಖಕ, ರೌಫ್ ಅಹ್ಮದ್ ಮುಂಬೈನಲ್ಲಿ ನಿಧನರಾಗಿದ್ದಾರೆ.

70ರ ದಶಕದ ಮದ್ಯಭಾಗದಿಂದ ಸಂಪಾದಕರಾಗಿ, ನಿಯತಕಾಲಿಕೆಗಳ ಮೂಲಕ ಚಲನಚಿತ್ರ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಕೀರ್ತಿ ರೌಫ್ ಅಹ್ಮದ್ ಅವರದ್ದು. ಮೃತರು ಪತ್ನಿ, ಪುತ್ರ, ಪುತ್ರಿ,ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ ಎಂದೆನ್ನಲಾಗಿದೆ.

Also Read  ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ - ಪ್ರಧಾನಿ ಮೋದಿ ಅಭಿನಂದನೆ

error: Content is protected !!
Scroll to Top